ತಿರುಗಿ ಬಿದ್ರೆ ರಾವಣ ಎಂದ ‘ರಾಬರ್ಟ್’

ತಿರುಗಿ ಬಿದ್ರೆ ರಾವಣ ಎಂದ ‘ರಾಬರ್ಟ್’

ಬೆಂಗಳೂರು, ಫೆ. 16 : ತಾಳ್ಮೆ, ಪ್ರೀತಿಯಿಂದ ಬಂದರೆ ರಾಮ, ಅದೇ ತಿರುಗಿ ಬಿದ್ದರೆ ಲಂಕಾಧಿಪತಿ ದಶಕಂಠ ರಾವಣ ಎಂದು ರಾಬರ್ಟ್ ಅವತಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಘರ್ಜಿಸಿದ್ದಾರೆ.
43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದಾಸನಿಗೆ ಅಭಿಮಾನಿಗಳು ರಾತ್ರಿಯೇ ಶುಭಕೋರಿ ಬರ್ತ್ ಡೇ ಆಚರಿಸಿ ಖುಷಿಪಟ್ಟಿದ್ದಾರೆ. ಇದೇ ಸಂಭ್ರಮದ ನಡುವೆ ರಾಬರ್ಟ್ ಚಿತ್ರ ತಂಡ ದರ್ಶನ್ ಹುಟ್ಟುಹಬ್ಬದ ದಿನವೇ ದಾಸನ ಬಹುನಿರೀಕ್ಷಿತ ಚಿತ್ರ ರಾಬರ್ಟ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿ ಡಿ ಬಾಸ್ ಹಾಗೂ ಅವರ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ತಮ್ಮ ಹುಟ್ಟು ಹಬ್ಬವನ್ನ ಡಿ ದಾಸ್ ಆಚರಿಸಿಕೊಂಡರು. ಅಲ್ಲದೇ ಇದೇ ವೇಳೆ ರಾಬರ್ಟ್ ಟೀಸರ್ ಕೂಡ ಅಭಿಮಾನಿಗಳ ಎದುರೇ ಲಾಂಚ್ ಮಾಡಲಾಯ್ತು. ಟೀಸರ್ ನಲ್ಲಿ ಖಡಕ್ ಲುಕ್ಕು, ಡೈಲಾಗ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಟೀಸರ್ ಬಿಡುಗಡೆಯಾದ 7 ಗಂಟೆಗಳಲ್ಲೇ ಭರ್ತಿ 4 ಲಕ್ಷಕ್ಕೂ ಅಧಿಕ ವ್ಯೂವ್ ಆಗಿದೆ.

Related