ಪ್ರವಾಸಿಗರೆ ಗಮನಿಸಿ, ಹೊಸ ವರ್ಷಕ್ಕೆ ಈ ಜಾಗಕ್ಕೆ ನೋ ಎಂಟ್ರಿ

  • In State
  • December 26, 2023
  • 87 Views
ಪ್ರವಾಸಿಗರೆ ಗಮನಿಸಿ, ಹೊಸ ವರ್ಷಕ್ಕೆ ಈ ಜಾಗಕ್ಕೆ ನೋ ಎಂಟ್ರಿ

ಚಿಕ್ಕಬಳ್ಳಾಪುರ: ವಿಶ್ವ ಪ್ರಸಿದ್ಧ ನಂದಿ ಗಿರಿಧಾಮ ಬೆಟ್ಟಕ್ಕೆ ಈ ಬಾರಿ ಹೊಸ ವರ್ಷ ಆಚರಣೆಯಂದು ಪ್ರವಾಸಿಗರು ಮೋಜು ಮಸ್ತಿ ಅವಕಾಶವಿಲ್ಲವೆಂದು ಹೇಳಲಾಗುತ್ತಿದೆ.

ಹೌದು ಈ ಬಾರಿ ಹೊಸ ವರ್ಷ ಆಚರಣೆಯನ್ನು ನಂದಿ ಗಿರಿಧಾಮದಲ್ಲಿ ಆಚರಣೆ ಮಾಡಬೇಕೆಂದು ಯೋಚಿಸಿರುವ ಪ್ರವಾಸಿಗರಿಗೆ ಈ ಬಾರಿ ತೊಂದರೆಯಾಗುತ್ತದೆ.

ಹೊಸ ವರ್ಷಾಚರಣೆಗೆ ಡಿಸೆಂಬರ್ 31ರ ಸಂಜೆ 6ರಿಂದ ಜನವರಿ 1ರ ಬೆಳಗ್ಗೆ 6 ಗಂಟೆವರೆಗೆ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಡಿಸಿ ರವೀಂದ್ರ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾವಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮದಲ್ಲಿ 2024ರ ನೂತನ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಬೇಕೆಂಬ ಎಂಬ ಆಸೆ ಇಟ್ಟುಕೊಂಡವರಿಗೆ ನಿರಾಸೆ ಮೂಡಿಸಿದೆ. ನೂತನ ವರ್ಷಾರಂಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರಿಗೆ ನಂದಿಗಿರಿಧಾಮ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

 

Related