ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ : ಡಿಸಿಎಂ ಸವದಿ

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ : ಡಿಸಿಎಂ ಸವದಿ

ರಾಯಚೂರು : ಬಿ.ಎಸ್ ಯಡಿಯೂರಪ್ಪ ಅವರೇ ಎರಡೂವರೆ ವರ್ಷ ಅಧಿಕಾರ ಪೂರೈಸಲಿದ್ದಾರೆ. ಸಿಎಂ ಬದಲಾವಣೆ ಸಂಗತಿಯೇ ಊಹಾಪೋಹ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಸಿಂಧನೂರಿನಲ್ಲಿ ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಸಿಎಂ ಬದಲಾವಣೆ ಕುರಿತಂತೆ ಯಾವುದೇ ಚರ್ಚೆಯಿಲ್ಲ, ಇಲ್ಲದ ವದಂತಿಗೆ ರೆಕ್ಕೆಪುಕ್ಕ ಕಟ್ಟಲಾಗಿದೆ, ಯಾವುದರಲ್ಲೂ ಹುರುಳಿಲ್ಲ. 2023 ರಲ್ಲೂ ಸಾರ್ವತ್ರಿಕ ಚುನಾವಣೆಯನ್ನು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿಯೇ ಎದುರಿಸುತ್ತೇವೆ. ಅವರು ಹಿರಿಯರು ಹೀಗಾಗಿ ಅವರ ನಿರ್ದೇಶನದಲ್ಲಿ ನಾವೆಲ್ಲ ಮುನ್ನಡೆಯುತ್ತೇವೆ ಎಂದರು.

ಬೆಂಗಳೂರಿನಲ್ಲಿ  ಡಿಫೆನ್ಸ್  ಲ್ಯಾಂಡ್  ಬದಲಾವಣೆ  ಕೆಲಸಕ್ಕಾಗಿ  ಕೇಂದ್ರ ಸಚಿವ ರಾಜನಾಥಸಿಂಗ್ ಹಾಗೂ ಇತರ ಸಚಿವರನ್ನು ಭೇಟಿ ಮಾಡಲು ನಾನು ಹೋಗಿದ್ದೆ. ಎಲ್ಲದಕ್ಕೂ ರಾಜಕೀಯ ಅವಶ್ಯವಿಲ್ಲ ಎಂದರು.

ಲಿಂಗಾಯಿತರನ್ನು  2ಎಗೆ ಸೇರಿಸುವ ಯಾವುದೇ ಪ್ರಸ್ತಾವನೆ ಇಟ್ಟುಕೊಂಡಿಲ್ಲ. ಪ್ರತ್ಯೇಕ ನಿಗಮವನ್ನು ರಚನೆ ಮಾಡಿ ಈಗಾಗಲೇ 500 ಕೋಟಿ ರೂ. ಮೀಸಲಿಡಲಾಗಿದೆ. ಹಿಂದುಳಿದವರ ಅಭಿವೃದ್ಧಿ ದೃಷಿಯಿಂದ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಈ ಮಾತಿಗೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮಲು ಅವರು ಕೂಡ ಧ್ವನಿಗೂಡಿಸಿ, ಸೇರ್ಪಡೆ ಪ್ರಶ್ನೆಯೇ ಇಲ್ಲ ಎಂದು ಉತ್ತರಿಸಿದರು.

Related