ಈ ಸೊಪ್ಪಲ್ಲಡಗಿದೆ ಆರೋಗ್ಯ..!

ಈ ಸೊಪ್ಪಲ್ಲಡಗಿದೆ ಆರೋಗ್ಯ..!

ಆಹಾರ ಪಧ್ಧತಿಯಲ್ಲಿ ಸೊಪ್ಪುಗಳ ಪಾತ್ರ ಅತ್ಯಂತ ಪ್ರಮುಖವಾದದ್ದು. ಸೊಪ್ಪು ಅಂದ್ರೆ ನೆನಪಾಗುವುದು ಪುಂಡೆ ಸೊಪ್ಪು. ಇದನ್ನು ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಾಣುತ್ತೇವೆ.  ಉತ್ತರ ಕರ್ನಾಟಕದ ಮಂದಿ ಇದಕ್ಕೆ ಪ್ರೀತಿಯಿಂದ ಪುಂಡೆಪಲ್ಲೆ ಎನ್ನುತ್ತಾರೆ. ಈ ಭಾಗದ ಜನರಿಗೆ ಈ ಸೊಪ್ಪು ಅಂದ್ರೆ ಫೆವ್ರೆಟ್. ಬಿಳಿಜೋಳದ ರೊಟ್ಟಿ ಹಾಗೂ ಸಜ್ಜೆರೊಟ್ಟಿ ಜೊತೆ ಇದರ ಕಾಂಭಿನೇಷನ್‌ ಎಲ್ಲಾ ಟೇಸ್ಟ್‌ ಗಳನ್ನು ಮೀರಿಸುವಂತದ್ದು. ಇದನ್ನೂ ಓದಿ: ಆರೋಗ್ಯ ಸುಧಾರಣೆಗೆ ಬೇಕು ಬಟರ್ ಫ್ರೂಟ್

ಯೆಸ್..ಹಳ್ಳಿಗಳಲ್ಲಿ ಇದನ್ನು ಬಡವರ  ಸೊಪ್ಪು  ಎಂದು ಕರೆಯುವುದು ವಾಡಿಕೆ. ಚಿಕ್ಕ ವಯಸ್ಸಿನಲ್ಲಿ ಜೇನು ನೊಣ ಕಚ್ಚಿದಾಗ ಇದರ ಹೆಸರನ್ನು ಹೇಳದೆ ಕಚ್ಚಿದ ಜಾಗದಲ್ಲಿ ಹಚ್ಚಿಕೊಂಡರೆ ಉರಿ ಕಡಿಮೆಯಾಗುತ್ತದೆ ಎಂದು ಅಜ್ಜಿ ಹೇಳುತ್ತಿದ್ದ ಮಾತನ್ನು ಕೇಳುತ್ತಿದ್ದೆವು. ‌

ಪುಂಡೆ ಸೊಪ್ಪುನ್ನು ನಾವು ಕ್ರಮೇಣವಾಗಿ ನಮ್ಮ ಆಹಾರದ ರೂಪದಲ್ಲಿ ಬಳಸುವುದರಿಂದ ನಮ್ಮ ದೇಹದಲ್ಲಿರುವ ಹಲವಾರು ರೋಗಗಳಿಗೆ ಇದು ರಾಮಬಾಣವಾಗಿದೆ. ಸಾಂಬಾರು ಮತ್ತು ಪಲ್ಯ ಹಾಗೂ ಚಟ್ನಿಗಳಲ್ಲಿ ಇದನ್ನು ಬಳಸಬಹುದು.

ನಮಗೆ ತಿಳಿದೋ ತಿಳಿಯದೆ ಈ ಸೊಪ್ಪಲ್ಲಿ ಹತ್ತು ಹಲವಾರು ವಿಟಮಿನ್‌ ಅಂಶಗಳಿವೆ. ಈ ಸೊಪ್ಪು ವಿಟಮಿನ ಸಿ ಮತ್ತು ವಿಟಮಿನ್‌ ಕೆ ಅನ್ನು ಅತ್ಯಧಿಕವಾಗಿ ಹೋಂದಿದೆ. ಕಬ್ಬಿಣ ಹಾಗೂ ನಾರಿನಾಂಶವನ್ನು ಹೊಂದಿದೆ. ಜೊತೆಗೆ ಹೃದಯದ ಆರೋಗ್ಯ ವನ್ನು ಬೆಂಬಲಿಸುತ್ತದೆ. ವಿಟಮಿನ್‌ ಸಿ 80 ರಷ್ಟು ಹೊಂದಿರುವ ಈ ಸೊಪ್ಪು ಆಸ್ಕಾರ್ಬಿಕ್‌ ಆಮ್ಲವನ್ನು ಹೊಂದಿದೆ . ಆಸ್ಕಾರ್ಬಿಕ್‌ ಆಮ್ಲವು ಇರುವೆ ಮತ್ತು ಜೇನುನೊಣ ಕಡಿತದ ಉರಿಯನ್ನು ಕಡಿಮೆ ಮಾಡುತ್ತದೆ. ಸೇವಿಸಿದವರ ದೇಹವನ್ನು ಗಟ್ಟಿಮುಟ್ಟಾಗಿ ಕಾಪಾಡುವ ಈ ಸೊಪ್ಪನ್ನು ಹಳ್ಳಿಗರು ಹೆಚ್ಚು ಇಷ್ಟ ಪಡುತ್ತಾರೆ.

 

Related