ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ತಾಂಡವಾಡುತ್ತಿದ್ದರು ಕೂಡ ಆರೋಗ್ಯ ಸಚಿವರಾಗಿರುವಂತಹ ದಿನೇಶ್ ಗುಂಡೂರಾವ್ ಅವರು ಕೂಲ್, ಕೂಲ್ ಆಗಿ ಸ್ವಿಮ್ಮಿಂಗ್ ಪೂಲ್ ಅಲ್ಲಿ ಈಜಾಡುತ್ತಿದ್ದಾರೆ.
ಇದನ್ನೇ ಬಂಡವಾಳವನ್ನು ಮಾಡಿಕೊಂಡಿರುವ ಬಿಜೆಪಿ ಪಕ್ಷದ ನಾಯಕರುಗಳು ಆರೋಗ್ಯ ಸಚಿವರಾಗಿರುವಂತಹ ದಿನೇಶ್ ಗುಂಡೂರಾವ್ ರವರು ಅವರ ವಿರುದ್ಧ ಆಕ್ರೋಶ ಅವರ ಹಾಕುತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್ ಅವರು, ಡೆಂಗ್ಯೂ ಸೊಳ್ಳೆ ಗಿಂತ ವೇಗವಾಗಿ ಬಿಜೆಪಿಯವರು ಸುಳ್ಳುಗಳನ್ನು ಹರಡಿಸುತ್ತಾರೆ ಹಾಗಾಗಿ ರಾಜ್ಯದಲ್ಲಿರುವ ಜನರು ಬಹಳ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದಾರೆ. ಇದನ್ನೂ ಓದಿ: ಮೈಸೂರು-ಕೊಡಗು ರೈಲ್ವೆ ಉನ್ನತೀಕರಣಕ್ಕೆ ಬದ್ಧ: ಯದುವೀರ್
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಕೆಲಸ ಇಲ್ಲ, ಸ್ವಿಮ್ಮಿಂಗ್ ಒಂದು ಉತ್ತಮ ಹವ್ಯಾಸ. ವಾಕಿಂಗ್, ಜಾಗಿಂಗ್, ರೀತಿ ಸ್ವಿಮ್ಮಿಂಗ್ ಕೂಡ ಆರೋಗ್ಯಕರ ಹವ್ಯಾಸ. ಬಿಜೆಪಿಯವರ ರೀತಿ ರೆಸಾರ್ಟ್ಗೆ ಹೋಗಿ ಸ್ವಿಮ್ ಮಾಡಿದ್ದಲ್ಲ ಅದು. ಸ್ವಿಮ್ಮಿಂಗ್ ಮಾಡಿದ ನಂತರ ಆಸ್ಪತ್ರೆಗಳಿಗೆ ಭೇಟಿ ನೀಡಿ ನನ್ನ ಕೆಲಸ ಮಾಡಿದ್ದೇನೆ. ಬಿಜೆಪಿ ನಾಯಕರು ಸುಮ್ಮನೆ ಸುಳ್ಳುಗಳನ್ನು ಹಬ್ಬಿಸುತ್ತಾರೆ ಅಷ್ಟೇ. ಡೆಂಗ್ಯೂ ಸೊಳ್ಳೆಗಿಂತ ವೇಗವಾಗಿ ಬಿಜೆಪಿಯವರು ಸುಳ್ಳು ಹರಡಿಸುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.
ಬಿಜೆಪಿಯವರಿಗೆ ಬರೀ ಮೋಜು ಮಸ್ತಿ ಎಂದು ಮಾತನಾಡಿ ಅಭ್ಯಾಸ ಇದೆ. ನಿನ್ನೆ ನೆಲಮಂಗಲ ಬಳಿ ಜನರಿಗೆ ಮದ್ಯ, ಬಾಡೂಟ ಹಂಚಿದ್ದರಲ್ಲ ಆ ರೀತಿ ನಾನೇನಾದ್ರೂ ಮಾಡಿದ್ದೀನಾ ಎಂದು ಪ್ರಶ್ನಿಸಿದ ಸಚಿವ ದಿನೇಶ್ ಗುಂಡೂರಾವ್, ಕಾರ್ಪೊರೇಷನ್ ಸ್ವಿಮ್ಮಿಂಗ್ ಪೂಲ್ನಲ್ಲಿ ಸ್ವಿಮ್ ಮಾಡ್ದೆ ತಪ್ಪೇನಿದೆ? ನಂತರ ಆಸ್ಪತ್ರೆಗಳಿಗೆ ಭೇಟಿ ನೀಡಿ ನನ್ನ ಕೆಲಸ ಮಾಡಿದ್ದೇನೆ. ಬಿಜೆಪಿ ನಾಯಕರು ಸುಮ್ಮನೆ ಸುಳ್ಳುಗಳನ್ನು ಹಬ್ಬಿಸುತ್ತಾರೆ ಎಂದು ತಿರುಗೇಟು ನೀಡಿದರು.