ಬೆಂಗಳೂರು: ಪ್ರೆಸ್ ಕ್ಲಬ್ ಆಫ್ ಬೆಂಗಳೂರು 2024-25ರ ಸಾಲಿನಲ್ಲಿ ನೂತನವಾಗಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಶಿವಕುಮಾರ್ ಬೆಳ್ಳಿತಟ್ಟೆರವರಿಗೆ ಪತ್ರಿಕಾ ಸಂಪಾಕರಾದ ಎನ್.ಕೆ.ಸ್ವಾಮಿರವರು, ಪತ್ರಿಕಾ ಛಾಯಗ್ರಾಹಕರಾದ ಪ್ರಭುಸ್ವಾಮಿ, ಸಂಪಾದಕ ಚಂದ್ರಶೇಖರ್ ಗೋಪಾಲ್ ರವರು, ವರದಿಗಾರಾದ ಮಧುರವರು ಆತ್ಮೀಯವಾಗಿ ಅಭಿನಂದಿಸಿ, ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಶಿವಕುಮಾರ್ ಬೆಳ್ಳಿತಟ್ಟೆರವರು ಮಾತನಾಡಿ, ಪತ್ರಕರ್ತರ ಹಿತಾರಕ್ಷಣೆ ಮತ್ತು ಸಂಕಷ್ಟ, ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ದಿನಪತ್ರಿಕೆಗಳು, ಟಿ.ವಿ.ಚಾನಲ್ ಮತ್ತು ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಇಂದು ಸಂಕಷ್ಟ ಪರಿಸ್ಥಿತಿಗಳು ಎದುರಿಸುತ್ತಿದೆ.
ಪತ್ರಿಕೆಗಳಿಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಯಿಂದ ಜಾಹಿರಾತು, ಪಿಂಚಿಣಿ ಸೌಲಭ್ಯ ಮತ್ತು ವೈದ್ಯಕೀಯ ಸೌಲಭ್ಯ ಹಾಗೂ ಬಸ್ ಪಾಸ್ ವ್ಯವಸ್ಥೆ ಸಕಾಲಕ್ಕೆ ಸಿಗುವಂತೆ ಮಾಡುವಲ್ಲಿ ಪ್ರಥಮ ಆದ್ಯತೆ ನೀಡುತ್ತೇನೆ ಎಂದರು. ಇದನ್ನೂ ಓದಿ: ಪ್ರೆಸ್ ಕ್ಲಬ್ ಆಫ್ ಬೆಂಗಳೂರು 2024-25ನೇ ಚುನಾವಣೆ ಫಲಿತಾಂಶ
ಪತ್ರಕರ್ತರ ವೈದ್ಯಕೀಯ ಪರಿಹಾರ ಬಿಬಿಎಂಪಿಯಲ್ಲಿ 2 ಕೋಟಿ ರೂಪಾಯಿ ಅನುದಾನ ಮತ್ತು ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ 2 ಕೋಟಿ ರೂಪಾಯಿ ಅನುದಾನ ಪ್ರತಿ ತಿಂಗಳು ಜಾಹಿರಾತು ನೀಡುವಂತೆ ಸತತ ಹೋರಾಟದಿಂದ ಸಾಧ್ಯವಾಗಿದೆ.
ಇಂದಿನ ಮಾಧ್ಯಮ ಶರವೇಗದಲ್ಲಿ ಬೆಳಯುತ್ತಿದೆ, ಅಷ್ಟು ಸಂಕಷ್ಟ ಸಮಸ್ಯೆಗಳು ಇದೆ. ಪತ್ರಕರ್ತರ ಹಿತರಕ್ಷಣೆಗಾಗಿ ನನ್ನ ಪ್ರಯತ್ನ, ಹೋರಾಟ ಇದ್ದೇ ಇರುತ್ತದೆ. ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ ಪ್ರೆಸ್ ಕ್ಲಬ್ ಸದಸ್ಯರಿಗೆ ಮತ್ತು ಪತ್ರಕರ್ತರ ಮಿತ್ರರಿಗೆ ಹೃತ್ವೂರ್ವಕ ಧನ್ಯವಾದಗಳು ಎಂದು ಹೇಳಿದರು.