ಜ್ಞಾನವನ್ನು ದಾರೆಯೆರೆಯುವನೇ ಶಿಕ್ಷಕ

  • In State
  • August 2, 2021
  • 276 Views
ಜ್ಞಾನವನ್ನು ದಾರೆಯೆರೆಯುವನೇ ಶಿಕ್ಷಕ

ರಾಮದುರ್ಗ:ನಿವೃತ್ತರಾದ ಸಂಖ್ಯಾಶಾಸ್ತç ಉಪನ್ಯಾಸಕ ಪ್ರೊ.ಸುರೇಶ ಗುಗದನವರು ಕೇವಲ ಬೋಧಕರಾಗಿರದೇ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪಠ್ಯಪುಸ್ತಕ ರಚನಾ ತಂಡದಲ್ಲಿ ಸದಸ್ಯರಾಗಿದ್ದು, ಅನೇಕ ಪುಸ್ತಕಗಳನ್ನು ರಚಿಸಿದ್ದಾರೆಂದು ಪ್ರಾಚಾರ್ಯ ಪ್ರೊ.ವಿ.ಬಿ.ಸೋಮಣ್ಣವರ ಹೇಳಿದರು.

ವಿಶ್ವಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಬೀಳ್ಕೋಡುವ ಸಮಾರಂಭದಲ್ಲಿ ಪ್ರೊ.ಸುರೇಶ ಗುದಗನವರು ಮಾತಾನಾಡಿ ಸೇವೆಯಿಂದ ನಿವೃತ್ತನಾಗಿದ್ದೆ ಹೊರತು ಪ್ರವೃತ್ತಿಯಿಂದಲ್ಲ. ಜೀವಿತ ಅವಧಿಯ ವರೆಗೂ ಬೋಧನೆ ಕಾರ್ಯದಲ್ಲಿ ತೊಡಗುತ್ತೇನೆಂದು ಹೇಳಿದರು.

ಸಿ.ಎಸ್.ಬೆಂಬಳಗಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಜಶ್ರೀ ಮಾತಾನಾಡಿ ಜ್ಞಾನವನ್ನು ವಿದ್ಯಾರ್ಥಿಗಳಿಗೆ ದಾರೆ ಎರೆದು ಅವರನ್ನು ಸುಜ್ಞಾನಿಗಳಾಗಿ ಮಾಡುವ ಶಕ್ತಿ ಇರುವುದು ಶಿಕ್ಷಕನಿಗೆ ಮಾತ್ರ. ಅಂತಹ ಪವಿತ್ರ ಕೆಲಸದಲ್ಲಿ ಪ್ರಾಮಾಣಿಕತೆ ಇದ್ದರೆ ಮಾತ್ರ ಸಮಾಜ ಗೌರವದಿಂದ ಕಾಣುತ್ತದೆ ಎಂದು ತಿಳಿಸಿದ್ದರು.

ಉಪನ್ಯಾಸಕ ಸಿ.ಬಿ.ನರಗುಂದ, ವಿ.ಎಸ್.ಕಿಲಬನೂರ, ಕವಿತಾ ಕುಲಕರ್ಣಿ, ಮಲ್ಲಿಕಾರ್ಜುನರೆಡ್ಡಿ ಗೊಂದಿ, ಎಂ.ಎಚ್ ಕುಲಕರ್ಣಿ, ಎಸ್.ಪಿ.ಖೇತಗೌಡರ, ಗೋಪಾಲ ರಾಠೋಡ, ಬಿ.ಎಚ್.ತೆಗ್ಗಿನಮನಿ, ಮಂಜುನಾಥ ಮೊಹಿತೆ ಇದ್ದರು.

Related