ಲಯನ್ ಕಿಂಗ್ ಘರ್ಜನೆ

ಗಾಂಧಿನಗರ, ಮಾ. 3 : ಗ್ರಾಮದ ಬೀದಿಯಲ್ಲಿ ದಿಢೀರ್ ಸಿಂಹವೊಂದು ಕಾಣಿಸಿಕೊಂಡಿದದ್ದು, ಜನರಲ್ಲಿ ಸಂಚಲ ಸೃಷ್ಟಿಸಿದೆ.
ಗುಜರಾತ್ನ ಮಾದವಪುರ ಗ್ರಾಮದಲ್ಲಿ ಸಿಂಹ ಜನರನ್ನು ಅಟ್ಟಿಸಿಕೊಂಡು ಬರುತ್ತಿದೆ. ಸಿಂಹ ಬರುತ್ತಿರುವುದನ್ನು ನೋಡಿದ ಗ್ರಾಮಸ್ಥರು ಭೀತಿಯಿಂದ ಚದುರಿ ಹೋಗುತ್ತಾರೆ. ಈ ವಿಡಿಯೋವನ್ನು ಅರಣ್ಯ ಇಲಾಖೆ ಅಧಿಕಾರಿ ಸುಸಂತಾ ನಂದಾ ಎಂಬುವವರು ಮಾಡಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಅಂದಾಜು 6 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಹಲವು ಪ್ರತಿಕ್ರಿಯೆಗಳು ಕೂಡ ಬಂದಿವೆ.
ಮಾದವಪುರ ಗ್ರಾಮ ಬೀದಿಯಲ್ಲಿ ಸಿಂಹ ಗ್ರಾಮದ ಬೀದಿಯಲ್ಲಿ ಓಡಿ ಬರುತ್ತಿರುತ್ತದೆ. ಈ ವೇಳೆ ಗುಂಪಾಗಿ ನಿಂತಿದ್ದ ಜನರು ದಿಗಿಲುಗೊಂಡು ಓಡಿ ಹೋಗುತ್ತಾರೆ. ಸಿಂಹ ಹಾಗೆ ಬೀದಿಯಲ್ಲಿ ಸಂಚರಿಸಿ ಕಣ್ಮರೆಯಾಗುತ್ತದೆ. ಈ ವಿಡಿಯೋ ತುಣುಕಿಗೆ ಸುಸಂತಾ ನಂದಾ ಅವರು ಸಿಂಹ ಉಸೈನ್ ಬೋಲ್ಟ್ಗಿಂತ ವೇಗವಾಗಿ ಓಡಿ ಬರುತ್ತಿದೆ. ಇದರಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
ವಿಡಿಯೋ ವೀಕ್ಷಿಸಿದವರು ಸಿಂಹ ಮುಂದೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅವರು ಸಿಂಹ ಯಾವುದೇ ತೊಂದರೆ ಇಲ್ಲದೆ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.

Related