ಲಾಕ್‌ಡೌನ್ ನಿರ್ಧಾರ ಜಿಲ್ಲಾಧಿಕಾರಿಗಳಿಗೆ ಬಿಟ್ಟ ಮೋದಿ

ಲಾಕ್‌ಡೌನ್ ನಿರ್ಧಾರ ಜಿಲ್ಲಾಧಿಕಾರಿಗಳಿಗೆ ಬಿಟ್ಟ ಮೋದಿ

ನವದೆಹಲಿ : ರಾಜ್ಯದಲ್ಲಿ ಕೊರೋನಾ 2ನೇ ಅಲೆ ತಾಂಡವವಾಡುತ್ತಿದೆ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ 9 ರಾಜ್ಯಗಳ ಸಿ.ಎಂ, 46 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜೊತೆ ಸಭೆ ನಡೆಸಿದ್ದಾರೆ.

ಬಳಿಕ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ ಜಿಲ್ಲಾಧಿಕಾರಿಗಳ ಕಾರ್ಯವನ್ನು ಲಾಕ್‌ಡೌನ್ ನಿರ್ಧಾರ ಜಿಲ್ಲಾಧಿಕಾರಿಗಳಿಗೆ ಬಿಟ್ಟರು. ಕೊರೋನಾ ನಿಯಂತ್ರಿಸಲು ಎಲ್ಲರು ಒಗ್ಗಟಾಗಿ ಕೆಲಸ ಮಾಡಬೇಕು. ಕೊರೋನಾ ವಾರಿಯರ್ಸ್ಗೆ ಸ್ಫೂರ್ತಿ ತುಂಬಿರಿ. ನಿಮ್ಮ ಸ್ಫೂರ್ತಿದಾಯಕ ಮಾತುಗಳಿಂದ ವಾರಿಯರ್ಸ್ಗೆ ವಿಶ್ವಾಸ ಹೆಚ್ಚುತ್ತದೆ.

ಕೊರೋನಾ ನಿಯಂತ್ರಿಸಲು ಯಾವುದೇ ಮಾರ್ಗವಿದ್ದರೂ ಅದನ್ನು ಅಳವಡಿಸಿಕೊಳ್ಳಿ ಎಂದ ಪ್ರಧಾನಿ ಮೋದಿ ನಿಮ್ಮ ಕೆಲಸ ಇತರರಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕೆಲಸ ಶ್ಲಾಘಿಸಿದರು.

ಈ ವೇಳೆ ಕರೊನಾ ನಿಯಂತ್ರಿಸಲು ಮೂರು ಖಿ ಸೂತ್ರಗಳ ಸಲಹೆ ನೀಡಿದ ಪ್ರಧಾನಿ ಮೋದಿ, ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್ಮೆಂಟ್ ಮೂಲಕ ಕೊರೋನಾ ನಿಯಂತ್ರಿಸಬಹುದು ಎಂದರು.
ಪ್ರತಿಯೊಬ್ಬರ ಜೀವ ಉಳಿಸುವುದು ನಮ್ಮ ಕರ್ತವ್ಯ. ನಿಮ್ಮ ಜಿಲ್ಲೆಗಳಲ್ಲಿ ತೆಗೆದುಕೊಂಡ ಕ್ರಮ ಬೇರೆ ಜಿಲ್ಲೆಗಳಿಗೂ ಮಾದರಿ. ಹೀಗಾಗಿ ಲಾಕ್‌ಡೌನ್ ನಿರ್ಧಾರವನ್ನು ಜಿಲ್ಲಾಧಿಕಾರಿಗಳೇ ತೆಗೆದುಕೊಳ್ಳಬಹುದೆಂದು ಪ್ರಧಾನಿ ಮೋದಿ ಹೇಳಿದರು.

Related