ಕನ್ನಡ ಏಕೀಕರಣಕ್ಕೆ ಕೊಡುಗೆ ಅಪಾರ

ಕನ್ನಡ ಏಕೀಕರಣಕ್ಕೆ ಕೊಡುಗೆ ಅಪಾರ

ಗಜೇಂದ್ರಗಡ : ಕರ್ನಾಟಕ ಏಕೀಕರಣಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಗಿಂತ ಅತೀ ಹೆಚ್ಚು ಕೊಡುಗೆ ನೀಡಿರುವ ಹಿರಿಮೆ ಗದಗ ಜಿಲ್ಲೆ ವಿಷೇಷವಾಗಿ ರೋಣ ತಾಲೂಕಿನ ಕೊಡುಗೆ ಸ್ಮರಣೀಯವಾಗಿದೆ ಎಂದು ಸೂಡಿ ಗ್ರಾಮದ ಗುರು ಮಹಾಂತೇಶ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪಿ.ಎಫ್ ಗೌಡರ ಹೇಳಿದರು.

ಪಟ್ಟಣದ ಮೈಸೂರು ಮಠದಲ್ಲಿ ನಡೆದ 200ನೇ ವಾರದ ಸಾಹಿತ್ಯ ಚಿಂತನಾಗೊಷ್ಠಿಯಲ್ಲಿ ಉಪನ್ಯಾಸ ನೀಡಿ ಮಾತನಾಡಿ, ತಮ್ಮ ಯೌವನದ ಜೀವನವನ್ನು ಹೋರಾಟದ ಹಾದಿಯಲ್ಲಿ ಸಾಗಿ ಸರ್ವರಿಗೂ ಸಮಬಾಳು ಸಮಪಾಲು ಎನ್ನುವ ತತ್ವವನ್ನು ಅಳವಡಿಸಿ ಯುವಕರಲ್ಲಿ ಏಕೀಕರಣ ಚಳುವಳಿಗೆ ದಾವಿಸಲು ನಾನಾ ವೇಷಗಳನ್ನು ತೊಟ್ಟು ಏಕೀಕರಣದ ಅರಿವನ್ನು ಮೂಡಿಸಿ ಜೈಲುವಾಸವನ್ನು ಕೂಡಾ ಅನುಭವಿಸಿದರು ಎಂದರು.

ಈ ಸಂದರ್ಭದಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕು ಕಸಾಪ ಅಧ್ಯಕ್ಷ ಈಶ್ವರಪ್ಪ ರೇವಡಿ, ಬಿ.ವಿ ಮನವಳ್ಳಿ, ಶರಣಪ್ಪ ಬೇವಿನಕಟ್ಟಿ, ಸಂಗಮೇಶ ಅಬ್ಬಿಗೇರಿ, ಶರಣಪ್ಪ ಭಜೇಂತ್ರಿ, ಶಂಕರ ಕಲ್ಲಿಂಗನೂರ, ಎಮ್.ಎಸ್ ಮಕಾನಾದಾರ, ಗ್ರಂಥಪಾಲಕ ಸುರೇಶ ಪತ್ತಾರ, ಕೆ.ಜಿ ಸಂಗಟಿ, ಹುಚ್ಚಪ್ಪ ಹಾವೇರಿ ಸೇರಿದಂತೆ ಮತ್ತಿತರರು ಇದ್ದರು

Related