ಮ್ಕಕಳಿಗೆ ಪಠ್ಯ ಪುಸ್ತಕ ವಿತರಣೆ

ಮ್ಕಕಳಿಗೆ ಪಠ್ಯ ಪುಸ್ತಕ ವಿತರಣೆ

ಬೈಲಹೊಂಗಲ: ಸಕಾಲದಲ್ಲಿ ಪಠ್ಯಪುಸ್ತಕ ವಿತರಣೆ ಕಾರ್ಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸಲಿದೆ ಎಂದು ಎಸ್.ಡಿ.ಎಮ್.ಸಿ ಅಧ್ಯಕ್ಷ ನಾರಾಯಣ ನಲವಡೆ ಹೇಳಿದರು.

ತಾಲೂಕಿನ ನಯಾನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಿ ಮಾತನಾಡಿ, ಕೊರೋನಾ ಎಂಬ ಸಾಂಕ್ರಾಮಿಕ ರೋಗ ಹರಡುತ್ತಿರುವ ಇಂತಹ ಸಂದರ್ಭದಲ್ಲಿಯೂ ಕೂಡಾ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಮಕ್ಕಳ ಕಲಿಕೆಗೆ ಹಿನ್ನಡೆಯಾಗಬಾರದೆಂದು ಘನ ಸರ್ಕಾರ ಬಹಳ ಮುತುವರ್ಜಿವಹಿಸಿ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಮಕ್ಕಳು ಕೂಡಾ ಶ್ರಮಪಟ್ಟು ಅಭ್ಯಾಸ ಮಾಡಿ, ಉನ್ನತ ಶೈಕ್ಷಣಿಕ ಪ್ರಗತಿ ಸಾಧಿಸಬೇಕೆಂದರು.

ಮುಖ್ಯೊಪಾದ್ಯಾಯ ಗಣಪತಿ ಬಾಗಲೆ, ವಿರನಗೌಡ ಹುಲೆಪ್ಪನವರ, ಬಸವರಾಜ ಕಡಕೋಳ, ರಾಯಪ್ಪ ಮರೆಕ್ಕನವರ, ನಿಂಗಪ್ಪ ಅಳಗೋಡಿ, ಜ್ಞಾನೇಶ್ವರ ದುರ್ವೆ, ಸವಿತಾ ಗುರುವನ್ನವರ, ಲೀಲಾವತಿ ಏಣಗಿ, ಜ್ಯೋತಿ ಅರವಳ್ಳಿ, ಪಿ.ಬಿ ಮಂತ್ರೋಪಕರ, ಮಿನಾಕ್ಷಿ ಹರಿಜನ, ಜಿ.ಟಿ ದೊಡವಾಡ, ಜೆ.ಬಿ ಕಲಾಜ, ವಿ.ಪಿ ಹಿರೇಮಠ, ಐ.ಜಿ ಬಾಗಲಕೋಟಿ ಇದ್ದರು.

Related