ಟಿಸಿ ಪಾಳ್ಯ ಸಿಗ್ನಲ್, ಟ್ರಾಫಿಕ್ ಗೋಳು

ಟಿಸಿ ಪಾಳ್ಯ ಸಿಗ್ನಲ್, ಟ್ರಾಫಿಕ್ ಗೋಳು

ಬೆಂಗಳೂರು: ಟ್ರಾಫಿಕ್ ಜಾಮ್! ಟ್ರಾಫಿಕ್ ಜಾಮ್….ನಗರದಲ್ಲಿ ಎಲ್ಲಿ ನೋಡಿದ್ರು ಟ್ರಾಫಿಕ್ ಜಾಮ್. ಹೊಸಕೋಟೆ ರಸ್ತೆ ಟಿ.ಸಿ ಪಾಳ್ಯ ರಸ್ತೆಯಲ್ಲಿರುವ ಸಿಗ್ನಲ್ ಹತ್ತಿರ ಯಾವಾಗ್ ನೋಡಿದ್ರು  ಜನ ಜಾತ್ರೆಯಂತೆ ಒಬ್ಬರ ಮೇಲೆ ಒಬ್ಬರು ಬೀಳುವಂತೆ ನಿಂತಿರುತ್ತಾರೆ . ಇಲ್ಲಿ ಸಾರ್ವಜನಿಕರು ರಸ್ತೆ ದಾಟಲು ಘಂಟೆಗಟ್ಟಲೆ ಕಾಯಲೇಬೇಕು. ಅದ್ರಲ್ಲಂತು ವೃದ್ಧರು, ಶಾಲೆ ಮಕ್ಕಳು ಜೀವ ಕೈಯಲ್ಳಿ ಹಿಡಿದುಕೊಂಡು ರಸ್ತೆದಾಟಲು ಪರದಾಡಬೇಕಿದೆ.

ಈ ರಸ್ತೆ ನ್ಯಾಷನಲ್ ಹೈ-ವೇ, ಬೆಂಗಳೂರ್ ಟು ಚೆನ್ನೈ ಗೆ ಹೋಗುವ ಎನ್.ಹೆಚ್. ಇಂತಹ ರಸ್ತೆಯಲ್ಲಿ ಪದೇ ಪದೇ ಸಿಗ್ನಲ್ ಬಿಳ್ತಾ ಇರುತ್ತೆ. ಸರ್ಕಲ್ ನ ನಾಲ್ಕು ಭಾಗಗಳು ಸಿಗ್ನಲ್ ಕ್ಲೀಯರ್ ಆಗುವವರೆಗೆ ಎದೆ ಢಬ ಢಬ ಎನ್ನುತ್ತದೆ. ಬೈಕ್‌ ಸವಾರರು 5 ಸೆಕೆಂಡ್ 100 ರಷ್ಟು ಸ್ಪೀಡ್ ಹೋಗುವ ರೀತಿ ನೋಡಿದ್ರಂತು ಒಂದು ಕ್ಷಣ ಜೀವ ನಿಂತೇ ಬಿಡುತ್ತೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸಾರ್ವಜನಿಕರು ರಸ್ತೆ ದಾಟುವುದಾದರು ಹೇಗೆ?.

ಸಾರ್ವಜನಿಕರು ಬೆಳಿಗ್ಗೆ ತಮ್ಮ ತಮ್ಮ ಶಾಲಾ, ಕಾಲೇಜು ಮತ್ತು ಕಾಯಕಗಳಿಗೆ ಹೋಗುವದಾದರು ಹೇಗೆ? ಕೇವಲ ಟಿ.ಸಿ ಪಾಳ್ಯ ಸಿಗ್ನಲ್ ನಲ್ಲಿ ಕನಿಷ್ಟ 25 ನಿಮಿಷವಾದ್ರು ಕಾಯಿಲೇಬೇಕು.  ಇದನ್ನ ಯಾವ ಪುಣ್ಣಾತ್ಮ ಯಾವ ಘಳಿಗೆಯಲ್ಲಿ ಗ್ರೀನ್ ಸಿಟಿ ಅಂತ ಹೇಳಿಬಿಟ್ನೋ ಏನೊ ಗೊತ್ತಿಲ್ಲ. ಇಲ್ಲಿ ನೊಡಿದ್ರೆ ರಸ್ತೆಬದಿ ತಾಜ್ಯ ಅಲ್ಲಲ್ಲಿ ಬೇಕಾಬಿಟ್ಟಿ ಹಾಕಿರುವ ಮಣ್ಣು. ಒಡೆದ ನೀರಿನ ಪೈಪುಗಳು. ರಸ್ತೆಮೇಲೆ ಚರಂಡಿ ನೀರು. ಬಿ.ಬಿಎಂ.ಪಿ ಯವರು ಹಾಕಿರುವ ತಾಜ್ಯ, ರಸ್ತೆ ತುಂಬ ದೂಳು. ವಾಯುಮಾಲಿನ್ಯದಿಂದ ಹರಡುವ ಮಾರಣಾಂತಿಕ ರೋಗಗಳಾದ ಅಸ್ತಮದಂತ ರೋಗಗಳು ಹರಡುವ ಭೀತಿ ಉಂಟಾಗಿದ್ದು, ಈ ಗೋಳನ್ನ ಯಾರು ಕೇಳೋರೆ ಇಲ್ಲದಂತಾಗಿದೆ.

ಒಂದು ಕಡೆ ಆರೋಗ್ಯ, ಇನ್ನೋಂದು ಕಡೆ ಈ ಟ್ರಾಫಿಕ್ ಸಮಸ್ಯೆ. ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುವುದಂತು ಸತ್ಯ. ಈ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.

ಈ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಕೆಲವು ಸಮಿತಿಗಳನ್ನು ರಚಿಸುವ ಅನಿವಾರ್ಯತೆ ಇದೆ. ಮುಖ್ಯವಾಗಿ ಬೆಂಗಳೂರು ಟು ಚೆನೈ ರಸ್ತೆಗೆ ಸ್ಪೀಡ್ ಲಿಮಿಟ್ ಗಾಗಿ ರೋಡ್ ಬ್ರೇಕರ್ ಗಳನ್ನು ಅಳವಡಿಸಬೇಕು. ಸಾರ್ವಜನಿಕರರ ಅನುಕೂಲಕ್ಕಾಗಿ ಫ್ಲೈ ವೋವರ್ ಅಥವಾ ಸ್ಕೈ ವಾಕ್ ನಿರ್ಮಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಿ ನಿಟ್ಟುಸಿರು ಬಿಡುವಂತಾಗುತ್ತದೆ.

ಈ ನಿಟ್ಟಿನಲ್ಲಿ ಸರ್ಕಾರ ಕೂಡಲೆ ಕಾರ್ಯೋನ್ಮುಕರಾಗಿ ನಮ್ಮ ನಗರ ಬೆಂಗಳೂರು ಸಿಲಿಕಾನ್ ಸಿಟಿ ಗೆ ಒಂದು ಅರ್ಥ ತರಬೇಕು ಎಂದು ಸಾರ್ವಜನಿಕರು ಪ್ರಜಾವಾಹಿನಿ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

 

(ವರದಿಗಾರ)

ಎ.ಚಿದಾನಂದ

Related