ನಾನು ಕೊನೆಯವರೆಗೂ ನಿಮ್ಮನ್ನು ಪ್ರೀತಿಸುತ್ತೇನೆ: ಕಿಚ್ಚ ಸುದೀಪ್

ನಾನು ಕೊನೆಯವರೆಗೂ ನಿಮ್ಮನ್ನು ಪ್ರೀತಿಸುತ್ತೇನೆ: ಕಿಚ್ಚ ಸುದೀಪ್

ಸ್ಯಾಂಡಲ್‍ವುಡ್ ಪೈಲ್ವಾನ್ ಕಿಚ್ಚ ಸುದೀಪ್ ಅವರು ತಮ್ಮ ತಂದೆ-ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದ್ದಾರೆ.

ಇವರು ನನ್ನನ್ನು ರೂಪಿಸಿದವರು, ಬೆಳೆಸಿದವರು, ಗಟ್ಟಿಗೊಳಿಸಿದವರು, ಅಂದವಾಗಿಸಿದವರು, ಆಶೀರ್ವದಿಸಿದವರು, ನನ್ನ ಶ್ರೇಯಸ್ಸಿಗಾಗಿ ಪ್ರಾರ್ಥಿಸುವವರು. 54 ವರ್ಷದಿಂದ ಒಟ್ಟಾಗಿ ಸಾಗುತ್ತಿರುವ ನಿಮಗೆ ತುಂಬು ಹೃದಯದ ಶುಭಾಶಯಗಳು. ನೀವು ಇನ್ನಷ್ಟು ವರ್ಷಗಳ ನಮ್ಮೊಟ್ಟಿಗೆ ಕಾಲಕಳೆಯಬೇಕಿದೆ. ನಾನು ಕೊನೆಯವರೆಗೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.


ಸುದೀಪ್ ಅವರು ಕೋಟಿಗೊಬ್ಬ-3 ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಸಿನಿಮಾ ಕೊನೆಯ ಹಂತ ತಲುಪಿದೆ.

Related