ಶಿವಯೋಗ ವಿಧಾನದಿಂದ ಬದುಕಿನ ‌ಒತ್ತಡ ದೂರ

  • In State
  • February 21, 2020
  • 403 Views
ಶಿವಯೋಗ ವಿಧಾನದಿಂದ ಬದುಕಿನ ‌ಒತ್ತಡ ದೂರ

ಅಥಣಿ, ಫೆ. 21: ಅತಿಯಾದ ಒತ್ತಡ ಆಧುನಿಕ‌ ಜಗತ್ತಿನ ಮಹಾಮಾರಿ. ಅನೇಕ ಭಾರತೀಯರಲ್ಲಿ ಇದರ ಪ್ರಮಾಣ ಹೆಚ್ಚು. ಅನೇಕ ರೋಗಗಳಿಗೆ ಇದು ಕಾರಣವಾಗಲಿದೆ. ಶಿವಯೋಗ ವಿಧಾನದಿಂದ ಬದುಕಿನಲ್ಲಿನ ‌ನಾಟಕೀಯತೆ, ಸಿನಿಕತನ ದೂರವಾಗಲಿದೆ ಎಂದು ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಸಂದೇಶ ನೀಡಿದರು.

ಅಥಣಿ ಗಚ್ಚಿನ ಮಠದ ಶಿವರಾತ್ರಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಇಂದು ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರಿಂದ ಸಾಮೂಹಿಕ ಇಷ್ಟಲಿಂಗ ಪೂಜಾ ಸಹಜ ಶಿವಯೋಗ ಕಾರ್ಯಕ್ರಮವು ಇಂದು ಬೆಳಗ್ಗೆ 7 – 30 ಗಂಟೆಗೆ ವಿದ್ಯಾಪೀಠ ಶಾಲಾ ಆವರಣದಲ್ಲಿ ಜರುಗಿತು ಸಹಜ ಶಿವಯೋಗ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಮುರುಘಾ ಮಠದ ಡಾ. ಶ್ರೀ‌ ಶಿವಮೂರ್ತಿ ಮುರುಘಾ ಶರಣರು ಪರಿಣಾಮಕಾರಿ ಶಿವಯೋಗದ ವಿಧಾನಗಳು ಮತ್ತು ಅದರ ಲಾಭಗಳ ಕುರಿತು ವಿವರಿಸಿದರು.  ಭಕ್ತರು, ಹರಗುರು ಚರಮೂರ್ತಿಗಳು ಶಿವಯೋಗದಲ್ಲಿ ಭಾಗಿಯಾದರು.ಈ ವೇಳೆ ಹಾವೇರಿಯ ಬಸವಶಾಂತಲಿಂಗ ಸ್ವಾಮೀಜಿ, ದಾವಣಗೆರೆ. ಬಸವಪ್ರಭು ಸ್ವಾಮೀಜಿ, ಶೇಗುಣಿಸಿಯ ಮಹಾಂತದೇವರು, ವಿರೇಶ್ವರ ದೇವರು, ಬಸವಕಿರಣ ಸ್ವಾಮೀಜಿ, ಗಣ್ಯರು, ಸಾಹಿತಿಗಳು, ಸಾಧಕರು ಪಾಲ್ಗೊಂಡಿದ್ದರು. ನಂತರ ಬಸವಧರ್ಮ ಧ್ವಜಾರೋಹಣ, ಪಲ್ಲಕ್ಕಿ ಉತ್ಸವ, ವ್ಯಾಸನತೋಳ ಮೆರವಣಿಗೆ ನಡೆಯಿತು. ಶಿವಯೋಗ – ಮಹಾದಾಸೋಹ ಜರುಗಿತು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಗೌರೀಶ್ ಪಾಟೀಲ್, ಶೋಭಾ ತಾಯಿ ಮಾಗಾವಿ ಅಂದಾನಪ್ಪ ಬಿಳ್ಳೂರ, ಸೊಮಶೇಖರ್ ವಾಂಗಿ ಹಾಗೂ ರಾಮನಗೌಡ ಪಾಟೀಲ ಸೇರಿದಂತೆ ಅನೇಕ ಮಹನೀಯರು ಪಾಲ್ಗೊಂಡಿದ್ದರು.

Related