ಗಾಯಕಿ ಮಂಗ್ಲಿ ಕಾರು ಅಪಘಾತ..!

ಗಾಯಕಿ ಮಂಗ್ಲಿ ಕಾರು ಅಪಘಾತ..!

ತನ್ನ ಮಧುರ ಕಂಠದಿಂದನೇ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಇನ್ನಿತರ ಭಾಷೆಗಳಲ್ಲಿ ಹಾಡುವ ಮೂಲಕ ಸಾವಿರಾರು ಅಭಿಮಾನಿಗಳನ್ನು ಗಳಿಸಿರುವ ಗಾಯಕಿ ಮಂಗ್ಲಿ ಅವರ ಕಾರಿಗೆ ಟ್ರಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಗಾಯಕಿ ಟ್ರಕ್ ಅವರ ಕಾರು ಡ್ಯಾಮೇಜ್ ಆಗಿದೆ. ಇದು ಮಾತ್ರವಲ್ಲದೆ ಕಾರಿನಲ್ಲಿ ಇಬ್ಬರು ಪರಿಚಯಸ್ತರ ಜೊತೆ ಚಲಿಸುತ್ತಿದ್ದ ಮಂಗ್ಲಿಗೆ ಸಣ್ಣಪುಟ್ಟ ಗಾಯಗಳಾಗಿ. ಅದೃಷ್ಟವಶಾತ್ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ಮಂಗ್ಲಿ ಅವರು ಭೀಕರ ಅಪಘಾತದಲ್ಲಿ ಸ್ವಲ್ಪದಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಟಾಲಿವುಡ್‌ನ ಹೆಚ್ಚು ಬೇಡಿಕೆಯ ಹಿನ್ನೆಲೆ ಗಾಯಕಿಯಾಗಿರುವ ಮಂಗ್ಲಿ ಅವರ ಅಪಘಾತದ ಸುದ್ದಿ ಸಿನಿಮಾ ಜಗತ್ತಿನಲ್ಲಿ ಬರಸಿಡಿಲಿನಂತೆ ಎರಗಿದೆ. ಇಬ್ಬರು ಪರಿಚಯಸ್ಥರೊಂದಿಗೆ ಶಂಶಾಬಾದ್‌ನಿಂದ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ತೊಂಡಪಲ್ಲಿ ರಸ್ತೆಯಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್​ವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಭಾರಿ ಅಪಘಾತ ಸಂಭವಿಸಿದೆ. ಆದರೆ ಅದೃಷ್ಟವಶಾತ್​, ಸಣ್ಣಪುಟ್ಟ ಗಾಯಗಳೊಂದಿಗೆ ಮಂಗ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

 

 

Related