ಮಂತ್ರಾಲಯದಲ್ಲಿ ಮುಸ್ಲಿಂ ಬಾಂಧವರಿಂದ ಶೋಭಾಯಾತ್ರೆಗೆ ಚಾಲನೆ

ಮಂತ್ರಾಲಯದಲ್ಲಿ ಮುಸ್ಲಿಂ ಬಾಂಧವರಿಂದ ಶೋಭಾಯಾತ್ರೆಗೆ ಚಾಲನೆ

ಇಂದು ಆಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆಂದು ಕೇವಲ ಆಯೋಧ್ಯೆಯಲ್ಲಿ ಮಾತ್ರವಲ್ಲದೆ ಕರ್ನಾಟಕ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇಂದು ರಾಮನಿಗೆ ವಿವಿಧ ದೇವಾಲಯಗಳಲ್ಲಿ ರಾಮನ ಹೆಸರಿನಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತಿದೆ.

ಇನ್ನು ಮಂತ್ರಾಲಯದಲ್ಲಿ ಶ್ರೀರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರಿಂದ ಕೇಸರಿ ಧ್ವಜ ಹಿಡಿದು ಶೋಭಾಯಾತ್ರೆಗೆ ಚಾಲನೆ ನೀಡಲಾಗಿದೆ.

ಹೌದು, ರಾಮನಿಗೆ ಕೇವಲ ಹಿಂದೂ ಜನಾಂಗದ ಭಕ್ತರು ಮಾತ್ರವಿಲ್ಲದೆ ಮುಸ್ಲಿಂ ಜನಾಂಗದಲ್ಲೂ ಕೂಡ ರಾಮನಿಗೆ ಭಕ್ತರಿದ್ದಾರೆ. ಮಂತ್ರಾಲಯದಲ್ಲಿ ಮುಸ್ಲಿಂ ಬಂದವರಿಂದಲೇ ಇಂದು ರಾಮನ ಶೋಭಾ ಯಾತ್ರೆಗೆ ಚಾಲನೆ ನೀಡಲಾಗಿದೆ.

ಶ್ರೀರಾಮನ ಶೋಭಾಯಾತ್ರೆಗೆ ಮುಸಲ್ಮಾನ ಬಾಂಧವರು ಚಾಲನೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಂತ್ರಾಲಯ ಮಠದಲ್ಲಿ ಸಂಭ್ರಮ ಕಳೆಕಟ್ಟಿದೆ. ಮಂತ್ರಾಲಯ ರಾಜಬೀದಿಗಳಲ್ಲಿ ಇಂದು ಶ್ರೀರಾಮನ ಭವ್ಯ ಮೆರವಣಿಗೆ ನಡೆಯಲಿದೆ.

ಪೀಠಾಧಿಪತಿ ಸುಭುದೇಂದ್ರ‌ ತೀರ್ಥ ಶ್ರೀಗಳ ನೇತೃತ್ವದಲ್ಲಿ ಶೋಭಾಯಾತ್ರೆ ನಡೆಯಲಿದೆ. ಮೊದಲು ಶ್ರೀಗಳಿಂದ ಚಾಲನೆ ನೀಡಲಾಗಿದ್ದು, ಬಳಿಕ ಮುಸಲ್ಮಾನ ಬಾಂಧವರಿಂದ ಯಾತ್ರೆಗೆ ಚಾಲನೆ ನೀಡಲಾಗಿದೆ.

 

Related