ನೀರು ಉಳಿಸಿ ಬೆಂಗಳೂರು ಬೆಳಸಿ ಅಭಿಯಾನಕ್ಕೆ ಚಾಲನೆ

ನೀರು ಉಳಿಸಿ ಬೆಂಗಳೂರು ಬೆಳಸಿ ಅಭಿಯಾನಕ್ಕೆ ಚಾಲನೆ

ಬೆಂಗಳೂರು: ಬೆಂಗಳೂರಿನಲ್ಲಿ ಯಾವ ಏರಿಯಾಗೆ ಹೋದರೂ, ಯಾವ ವಾರ್ಡ್​ಗೆ ಹೋದರೂ ನೀರಿನ ಸಮಸ್ಯೆ ಎದ್ದು ಕಾಣುತ್ತಿದೆ. ಹಲವೆಡೆ ವಾರಕ್ಕೆ 2 ದಿನ ಮಾತ್ರ ಕಾವೇರಿ ನೀರು ಬರುತ್ತಿದೆ. ಬೋರ್​ವೆಲ್​ಗಳ ನೀರು ಕೂಡ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ಬೆಂಗಳೂರು ನಿವಾಸಿಗರು ಕಂಗಾಲಾಗಿದ್ದಾರೆ.

ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿ ವತಿಯಿಂದ ನೀರು ಉಳಿಸಿ ಬೆಂಗಳೂರು ಬೆಳಸಿ ಅಭಿಯಾನಕ್ಕೆ ಚಾಲನೆ ಮತ್ತು ಬೆಂಗಳೂರು ನಾಗರಿಕರ ಅನುಕೂಲಕ್ಕಾಗಿ BWSSB ಸೃಜಿಸಿರುವ ಅಂತರ್ಜಲ, ಜಲಸಂರಕ್ಷಕ, ಜಲಮಿತ್ರ ಮತ್ತು ಜಲಸ್ನೇಹಿ ಆ್ಯಪ್ ಗಳ ಲೋಕಾರ್ಪಣೆ ಅಭಿಯಾನಕ್ಕೆ ಡಿ.ಕೆ.ಶಿವಕುಮಾರ್ ‌ ಚಾಲನೆ ನೀಡಿದರು.

ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ‘ನೀರು ಉಳಿಸಿ’ ಅಭಿಯಾನಕ್ಕೆ ಚಾಲನೆ ನೀಡಿದರು. ಇನ್ನು ನಗರದ ಬರದ ಬಗ್ಗೆ ಮಾತನಾಡಿದ ಅವರು, 6,900 ಬೋರ್​ವೆಲ್​ ಬತ್ತಿ ಹೋಗಿದೆ. 9,000 ಬೋರ್​ವೆಲ್​ಗಳು ಚಾಲ್ತಿಯಲ್ಲಿವೆ. ಹೊಸ ಬೋರ್​ವೆಲ್​ ಕೊರೆಯಲು ಅನುಮತಿ ನೀಡುತ್ತಿದ್ದೇವೆ. ಇನ್ನೊಂದು ಹೊಸ ಬೋರ್​ವೆಲ್​ ಕೊರೆಯುವಾಗ BWSSB ಪರ್ಮಿಷನ್ ತೆಗೆದುಕೊಳ್ಳಬೇಕು. ಅವರಿಗೆ ಎಷ್ಟು ನೀರು ಬೇಕು ಅದನ್ನು ಬಳಸಿ ಉಳಿದ ನೀರನ್ನು ಸರ್ಕಾರಕ್ಕೆ ಕೊಡಬೇಕು.

ಬಳಿಕ ಯಾವುದಕ್ಕೆ ಹಂಚಿಕೆ ಮಾಡಬೇಕು ಎಂಬುದನ್ನು ನಿಗಮ ಡಿಸೈಡ್ ಮಾಡುತ್ತೆ. ದೂರದ ಆಲೋಚನೆ ಇಟ್ಕೊಂಡು ಮೇಕೆ ದಾಟು ಹೋರಾಟ ಮಾಡಿದ್ದೆ. ನೀರನ್ನು ಹೇಗೆ ಉಳಿಸ ಬೇಕು, ಮುಂದಿ‌ ಪೀಳಿಗೆಗೆ ಹೇಗೆ ಉಪಯುಕ್ತವಾಗಿಸಬೇಕು ಎಂದು ಆಲೋಚನೆ ಮಾಡಿದ್ದೇವೆ. ಯುದ್ಧದ ರೀತಿಯಲ್ಲಿ ನಾವು ನೀರಿಗಾಗಿ ಯೋಜನೆ ರೂಪಿಸಬೇಕಿದೆ. ಟ್ಯಾಂಕರ್ ಮಾಫಿಯಾಕ್ಕೆ ನಿಯಂತ್ರಣ ಹೇರುವ ಕೆಲಸ ಆಗಿದೆ. 110 ಹಳ್ಳಿಗಳಿಗೂ ನೀರನ್ನು ಒದಗಿಸುವ ಕೆಲಸ ಮಾಡುತ್ತೇವೆ ಎಂದರು.

Related