ಕೇಸರಿಮಯವಾದ ಅಯೋಧ್ಯ!

ಕೇಸರಿಮಯವಾದ ಅಯೋಧ್ಯ!

ಸುಮಾರು 500 ವರ್ಷಗಳ ಹಿಂದಿನಿಂದಲೂ ಅಯೋಧ್ಯೆಯಲ್ಲಿ ಹಿಂದು-ಮುಸ್ಲಿಂಗಳ ಮಧ್ಯೆ ನ್ಯಾಯ ನಡೆಯುತ್ತಲೇ ಇತ್ತು. 500 ವರ್ಷಗಳ ನ್ಯಾಯಕ್ಕೆ ಇಂದು ಕೊನೆಯದಾಗಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆ ಇಂದು ನೆರವೇರಲಿದ್ದು, ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ಸುಮಾರು 12 ಗಂಟೆ 29 ನಿಮಿಷಗಳ ನಂತರ ರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ನರೇಂದ್ರ ಮೋದಿಯವರು ಸಾಧನೆಗೈದಿದ್ದಾರೆ.

ಇನ್ನು ವಿಶೇಷ ವಿಮಾನದಲ್ಲಿ ಅಯೋಧ್ಯ ರಾಮ ಮಂದಿರ ಉದ್ಘಾಟನೆಗೆ ನರೇಂದ್ರ ಮೋದಿಯವರು ಆಗಮಿಸುತ್ತಿದ್ದಂತಲೇ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದರು.

ಹಿಂದೂಗಳ 500 ವರ್ಷದ ಕನಸು ನನಸಾಗುವ ಸಮಯ ಬಂದೇ ಬಿಟ್ಟಿದೆ. ಅಯೋಧ್ಯೆ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಶುರುವಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ರಾಮನ ನಗರವಾದ ಅಯೋಧ್ಯೆ ಇಂದು ರಾಮಮಯವಾಗಿದೆ. ಹೂವುಗಳಿಂದ ಅಲಂಕರಿಸಲ್ಪಟ್ಟಿರುವ ಅಯೋಧ್ಯೆಯು ಗುಜರಾತ್‌ನಿಂದ ವಿಶೇಷವಾಗಿ ಕಳುಹಿಸಲಾದ 108 ಅಡಿ ಎತ್ತರದ ಧೂಪದ್ರವ್ಯದಿಂದ ಪರಿಮಳಯುಕ್ತವಾಗಿದೆ. ಇದೀಗ ಪ್ರಧಾನಿ ಮೋದಿ ಅಯೋಧ್ಯೆಗೆ ಬಂದಿಳಿದಿದ್ದಾರೆ. ಹೆಲಿಕ್ಯಾಪ್ಟರ್‌ ಮೂಲಕ ಪ್ರಧಾನಿ ಮೋದಿ ಅಯೋಧ್ಯೆಗೆ ಬಂದಿದ್ದಾರೆ. ಇದಕ್ಕೂ ಮುನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಯೋಧ್ಯೆ ರಾಮಮಂದಿರಕ್ಕೆ ಬಂದು ಪರಿಶೀಲನೆ ನಡೆಸಿದರು.

 

 

Related