ರೋಜರ್ ಫೆಡರರ್ ಔಟ್!

ರೋಜರ್ ಫೆಡರರ್ ಔಟ್!

ಜೂರಿಚ್ (ಸ್ವಿಜರ್ಲೆಂಡ್), ಫೆ.21 : ಸ್ವಿಸ್ ಮಾಸ್ಟರ್ ರೋಜರ್ ಫೆಡರಲ್ ಮಂಡಿನೋವಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಪಡೆದಿದ್ದು, ಇದೇ ಕಾರಣಕ್ಕೆ ಮುಂಬರುವ ಫ್ರಂಚ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಟೆನಿಸ್ ಟೂರ್ನಿಯಿಂದ ಹೊರಗುಳಿಯುತ್ತಿರುವುದಾಗಿ ಘೋಷಿಸಿದ್ದಾರೆ. ವಿಶ್ವ ದಾಖಲೆಯ 20 ಗ್ರ್ಯಾಂಡ್ ಸ್ಟ್ಯಾಮ್ ಪ್ರಶಸ್ತಿಗಳ ಒಡೆಯ 38 ವರ್ಷದ ರೋಜರ್, ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಸ್ವಿಜರ್ಲೆಂಡ್ನಲ್ಲಿ ಆರ್ಥ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವುದಾಗಿ ಅಭಿಮಾನಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಮುಂಬರುವ ಫ್ರೆಂಚ್ ಓಪನ್, ಇಂಡಿಯನ್ ವೆಲ್ಸ್ ಮಾಸ್ಟರ್ಸ್, ದುಬೈ ಓಪನ್, ಬೊಗೊಟ ಓಪನ್ ಹಾಗೂ ಮಿಯಾಮಿ ಮಾಸ್ಟರ್ಸ್ ಟೂರ್ನಿಗಳಿಂದ ಹೊರಗುಳಿಯಲಿದ್ದಾರೆ. ಇದೇ ವೇಳೆ ವಿಂಬಲ್ಡನ್ ಹೊತ್ತಿಗೆ ಗ್ರಾಸ್ ಕೋರ್ಟ್ ಟೂರ್ನಿಗಳಲ್ಲಿ ಕಮ್ ಬ್ಯಾಕ್ ಮಾಡುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Related