KC Valley : ಕೆರೆಗೆ ಕೊಳಚೆ ನೀರು ಸೇರ್ತಿದ್ರು, ಡೋಂಟ್ ಕೇರ್‍..!

KC Valley : ಕೆರೆಗೆ ಕೊಳಚೆ ನೀರು ಸೇರ್ತಿದ್ರು, ಡೋಂಟ್ ಕೇರ್‍..!

ಕೆಸಿ ವ್ಯಾಲಿ ಯೋಜನೆ ಮೂಲಕ ಕೋಲಾರ ನಗರದ ಹೃದಯ ಭಾಗದಲ್ಲೆ ಇರುವ ಸುಮಾರು 650 ಎಕರೆಯ ಕೋಲಾರಮ್ಮ ಕೆರೆಗೆ ಹೊಸ ರೂಪ ನೀಡಲು ಜಿಲ್ಲಾಡಳಿತ ಮುಂದಾಗಿದೆ, ಸುಮಾರು 8 ಕೋಟಿ ವೆಚ್ಚದಲ್ಲಿ ಕೆರೆ ಸುಂದರೀಕರಣ ಮಾಡಲು ಕಾಮಗಾರಿ ಆರಂಭವಾಗಿದೆ, ಆದರೆ ಕೆರೆಗೆ ತ್ಯಾಜ್ಯ ನೀರು ಹರಿಯುತ್ತಿದ್ದರು ಯಾರೊಬ್ಬರು ತಲೆಕೆಡಿಸಿಕೊಂಡಿಲ್ಲ. 

ಬೆಂಗಳೂರು ಮಹಾನಗರದಿಂದ ಕೇವಲ 60 ಕಿಲೋ ಮೀಟರ್ ದೂರವಿರುವ ಕೋಲಾರ ನಗರ ಇನ್ನೂ ಅಭಿವೃದ್ಧಿ ಕಾಣದೆ ಮೂಲೆ ಗುಂಪಾಗಿದೆ. ನಗರದಲ್ಲಿನ ಐದಾರು ಪಾರ್ಕ್ ಗಳಲ್ಲಿ, ಒಂದೂ ಪಾರ್ಕ್ ಅನ್ನು ನಿರ್ವಹಣೆ ಮಾಡಲಾಗದ ಸ್ತಿತಿಗೆ, ಇಲ್ಲಿನ ನಗರಸಭೆ  ತಲುಪಿದ್ದು, ಮೂಲಭೂತ ಸೌಕರ್ಯಗಳು ಸಿಗದೆ ನಗರದ ಜನತೆ ಕಂಗಾಲಾಗಿದ್ದಾರೆ. ಹಾಗೆಯೇ ರಸ್ತೆ, ಪುಟ್ ಪಾತ್ ಒಳಚರಂಡಿ, ರಾಜಕಾಲುವೆಗಳು ನಿರ್ವಹಣೆ ಇಲ್ಲದೆ, ನಗರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ.

ಆದರೆ ಕಳೆದ ವರ್ಷ ಆರಂಭವಾಗಿರೊ ನಗರದ, ಹೃದಯ ಭಾಗದಲ್ಲಿನ ಕೋಲಾರಮ್ಮ ಕೆರೆ ಅಭಿವೃದ್ಧಿ ಕಾಮಗಾರಿಯೂ ಹಳ್ಳ ಹಿಡಿಯುವತ್ತ ಸಾಗಿದೆ, ಕೋಲಾರಮ್ಮ ಕೆರೆ 650 ಎಕರೆ ವಿಸ್ತೀರ್ಣವನ್ನ ಹೊಂದಿದೆ, ಕಳೆದ ವರ್ಷ ಈ ಕೆರೆಯನ್ನ ಸುಂದರೀಕರಣ ಮಾಡುವ ದೃಷ್ಟಿಯಿಂದ, ವಿವಿಧ ಕಾಮಗಾರಿಗಳಿಗಾಗಿ 8 ಕೋಟಿ ಹಣವನ್ನ ಕೆ,ಸಿ ವ್ಯಾಲಿ ಯೋಜನೆಯಿಂದ ಬಿಡುಗಡೆ ಮಾಡಲಾಗಿದ್ದು, ಸಣ್ಣ ನೀರಾವರಿ ಇಲಾಖೆ ಕಾಮಗಾರಿಯನ್ನ ನಡೆಸುತ್ತಿದೆ, ವಾಕಿಂಗ್ ಪಾತ್, ಓಪನ್ ಸ್ಟೇಡಿಯಂ, ಜಿಮ್, ಬೋಟಿಂಗ್, ಹೊಟೆಲ್ ನಿರ್ಮಾಣ ಆಗಲಿದೆ.

Related