ಸರಕಾರಿ ಪ್ರೌಢಶಾಲೆ ಮಂಜುರು ಮಾಡಲು ಆಗ್ರಹ

ಸರಕಾರಿ ಪ್ರೌಢಶಾಲೆ ಮಂಜುರು ಮಾಡಲು ಆಗ್ರಹ

ಕಮತಗಿ : ಪಟ್ಟಣದಲ್ಲಿ 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು ಅದರಲ್ಲೂ ಬಡ ನೇಕಾರರು, ರೈತರು, ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜನ್ನು ಮಂಜುರು ಮಾಡಿಸಬೇಕೆಂದು ಶಾಸಕ ವೀರಣ್ಣ ಚರಂತಿಮಠ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ಬಡ ನೇಕಾರರು, ರೈತರು, ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿAದ ಇವರಿಗೆ ಹೆಚ್ಚಿನ ಡೋನೆಷನ್ ಕೊಟ್ಟು ಕಲಿಯಲಾಗದೆ. ಶಿಕ್ಷಣವನ್ನು ಮೊಟುಕುಗೊಳಿಸಿ ಪೇಪರ ಹಾಕುವುದು, ಹಾಲು ಮಾರಾಟಕ್ಕೆ, ಜಮೀನುಗಳ ಹಾಗೂ ಕಟ್ಟಡ ಕೆಲಸಕ್ಕೆ ಹೋಗುತ್ತಿದ್ದಾg.ೆ ಆದ್ದರಿಂದ ಕಮತಗಿ ಪಟ್ಟಣದಲ್ಲಿ  ಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸುವುದರಿಂದ ಸುತ್ತ ಮುತ್ತಲಿನ ಹಳ್ಳಿಯಲ್ಲಿರುವ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರೆಸಲು ಅನಕೂಲವಾಗುತ್ತದೆ.

ಈಗಾಲೇ ಪಟ್ಟಣದಲ್ಲಿರುವ ಡಿಪಿಇಪಿ ಶಾಲೆಯಲ್ಲಿ 450 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಆದರೆ ಇಲ್ಲಿ ಕೇವಲ 1ರಿಂದ 8ನೇ ತರಗತಿವರೆಗೆ ಮಾತ್ರ ಇದ್ದು, ಇದೆ ಶಾಲೆಯಲ್ಲಿ 9ರಿಂದ 10ನೇ ತರಗತಿಯವರೆಗೆ ಕಲಿಯಲು ಮಂಜುರು ಮಾಡಿಸಿ ಪ್ರೌಢಶಾಲೆಯನ್ನು ಇದೆ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

Related