ಮಾರ್ಗದರ್ಶನವಿಲ್ಲದೆ ಮಹಿಳಾ ಉದ್ಯಮಿಗಳ ಪ್ರತಿಭೆ ಸೊರಗುತ್ತಿದೆ: ರತ್ನಪ್ರಭಾ

ಮಾರ್ಗದರ್ಶನವಿಲ್ಲದೆ ಮಹಿಳಾ ಉದ್ಯಮಿಗಳ ಪ್ರತಿಭೆ ಸೊರಗುತ್ತಿದೆ: ರತ್ನಪ್ರಭಾ

ಬೆಂಗಳೂರು: ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಸಾಕಷ್ಟು ಪ್ರತಿಭಾವಂತ ಮಹಿಳಾ ಉದ್ಯಮಿಗಳಿದ್ದಾರೆ. ಆದರೆ ಈ ಎಲ್ಲ ಮಹಿಳಾ ಉದ್ಯಮದಾರರು ಸಮರ್ಪಕ ಹಾಗೂ ಸರಿಯಾದ ರೀತಿಯ ಮಾರ್ಗದರ್ಶನವಿಲ್ಲದೆ ಯಶಸ್ಸು ಗಳಿಸಲು ಸಾಧ್ಯವಾಗುತ್ತಿಲ್ಲ ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಉಬುಂಟು ಸಂಸ್ಥಾಪಕ ಅಧ್ಯಕ್ಷೆ ಕೆ. ರತ್ನಪ್ರಭಾ ಅವರು ನುಡಿದರು.

ಗುರುವಾರ ಬೆಂಗಳೂರಿನ ಎಫ್‌ಕೆಸಿಸಿಐ ಮತ್ತು ಉಬುಂಟು ನೇತೃತ್ವದಲ್ಲಿ ನಡೆದ ಎರಡು ದಿನಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಇಂದಿನ ಯುಗದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಉದ್ಯಮಿದಾರರಿಗೆ ಡಿಜಿಟಲ್ ತರಬೇತಿ ಹಾಗೂ ನಾಯಕತ್ವದ ತರಬೇತಿ ಎಷ್ಟರ ಮಟ್ಟಿಗೆ ಅಗತ್ಯವಿದೆ ಎಂದು ತಿಳಿಸಿದ ಅವರು, ಮಹಿಳಾ ಉದ್ಯಮಿಗಳಿಗೆ ನುರಿತ ತಜ್ಞರಿಂದ ವಿಶೇಷ ತರಬೇತಿಯನ್ನು ನೀಡುವ ಮುಖ್ಯ ಉದ್ದೇಶದಿಂದ ಉಬುಂಟು ಸಂಸ್ಥೆ ರಾಜ್ಯದ ಮೂಲೆ ಮೂಲೆಗಳಿಂದ ಕೆಲ ಉದ್ಯಮದಾರರನ್ನು ಆಯ್ಕೆ ಮಾಡಿ ಎರಡು ದಿನಗಳ ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಇನ್ನು ಅತಿ ಹೆಚ್ಚಿನ ಮಹಿಳಾ ಉದ್ಯಮದಾರರಿಗೆ ಹಾಗೂ ವಿವಿಧ ರಂಗಗಳಲ್ಲಿ ಆಸಕ್ತಿ ಇರುವ ಮಹಿಳೆಯರಿಗೆ ಮಾರ್ಕೆಟಿಂಗ್ ಮತ್ತು ಇನ್ನು ಇತರ ರಂಗಗಳಲ್ಲಿ ವಿಶೇಷ ತರಬೇತಿಗಳನ್ನು ನೀಡಲಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಗೋಪಾಲರೆಡ್ಡಿ, ಎಫ್‌ಕೆಸಿಸಿಐ ಉಪಾಧ್ಯಕ್ಷ ಚಂದ್ರ ಲಾಹೋಟಿ, ಎಫ್‌ಕೆಸಿಸಿಐ ಮಹಿಳಾ ಉದ್ಯಮಿಗಳ ಸಮಿತಿ ಅಧ್ಯಕ್ಷೆ ಉಮಾರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related