ಬೆಂಗಳೂರಿನ ಮಳೆ ಅವಾಂತರಕ್ಕೆ ಸತೀಶ್ ರೆಡ್ಡಿ ಪ್ರತಿಕ್ರಿಯೆ.

ಬೆಂಗಳೂರಿನ ಮಳೆ ಅವಾಂತರಕ್ಕೆ ಸತೀಶ್ ರೆಡ್ಡಿ ಪ್ರತಿಕ್ರಿಯೆ.

ಬೆಂಗಳೂರು, ಜೂ 22 : ಸಿಲಿಕಾನ್ ಸಿಟಿಯಲ್ಲಿ ಅತಿಯಾಗಿ ಮಳೆ ಸುರಿದ ಕಾರಣ ಶಾಸಕ ಎಂ. ಸತೀಶ್ ರೆಡ್ಡಿರವರು ಬೊಮ್ಮನಹಳ್ಳಿ ವಲಯಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೊಮ್ಮನಹಳ್ಳಿಯಲ್ಲಿ ಮಳೆ ಬರಿಲಿ ಬರದೇ ಇರಲಿ ನಾವು ಪ್ರತಿದಿನ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತೇವೆ.

* ಕಳೆದ ಒಂದು ವಾರದಿಂದ ಮಳೆ ನಿರಂತವಾಗಿ ಬರುವುದನ್ನು ನಾವು ನೋಡಿದ್ದೇವೆ. ತುರ್ತು ಸಂದರ್ಭಗಳಲ್ಲಿ ಬೇಕಾದಂತಹ ಸಲಹರಣೆಗಳು,  ಟ್ರಾಕ್ಟರ್ ಗಳು ,ಜೆಸಿಬಿ, ಇವೆಲ್ಲವನ್ನು ಪ್ರತಿ ತಿಂಗಳಿಗೊಮ್ಮೆ ಪರಿಶೀಲನೆ ನಡೆಸುವುದು ನನ್ನ ಕರ್ತವ್ಯ ಮತ್ತು ನಾನು ಅನೇಕ ವರ್ಷಗಳಿಂದ ನಿರ್ವಹಿಸುತ್ತಿದ್ದೇನೆ. ಮಳೆಗಾಲದಲ್ಲಿ ಹೆಚ್ಚರಿಕೆಯಿಂದಿರಬೇಕೆಂದು ನಾನು ಕಮಿಷನರ್ ಜೊತೆ ಮಾತನಾಡಿದ್ದೇನೆ.

* ಇಂಜಿನಿಯರಿಂಗ್ ಸಿಬ್ಬಂದಿ, ನಾನು ಮತ್ತು ನಮ್ಮ ಜಂಟಿ ಆಯುಕ್ತರು ಎಲ್ಲಾ ಒಟ್ಟಿಗೆ ಸೇರಿ ಮಳೆಗಾಲದ ತೊಂದರೆಗಳನ್ನು ನಿರ್ಮೂಲನೆ ಮಾಡಲು ಮತ್ತು  ಅದರ ಜವಾಬ್ದಾರಿಗಳನ್ನು ನಿರ್ಹಣೆ ಮಾಡಲು ನಾವೆಲ್ಲರು ಸಜ್ಜರಾಗಿದ್ದೇವೆ. ಸಾರ್ವಜನಿಕರು ಯಾರು ಕೂಡ ಹೆದರುವ ಅವಶ್ಯಕತೆ ಇಲ್ಲ ಮತ್ತು ಮಳೆ ಬರುವಂತಹ ಸಂದರ್ಭದಲ್ಲಿ ತುರ್ತಾಗಿ ಎಲ್ಲಾ ಕ್ರಮಗಳನ್ನು ನಾವು ಸಿದ್ದ ಪಡಿಸಿದ್ದೇವೆಂದು ಮಾತನಾಡಿದರು…

 

Related