ಪಾಕ್ ಪರ ಘೋಷಣೆ: ಇಂದು ಕಾರ್ಯಕ್ರಮ ಆಯೋಜಕರ ವಿಚಾರಣೆ

ಪಾಕ್ ಪರ ಘೋಷಣೆ: ಇಂದು ಕಾರ್ಯಕ್ರಮ ಆಯೋಜಕರ ವಿಚಾರಣೆ

ಬೆಂಗಳೂರು, ಫೆ. 22: ಫ್ರೀಡಂ ಪಾರ್ಕ್ನಲ್ಲಿ ಸಿಎಎ ವಿರೋಧಿಸಿ ಇಮ್ರಾನ್ ಪಾಷ ಪ್ರತಿಭಟನೆ ಆಯೋಜಿಸಿದ್ದರು. ಇದೇ ವೇದಿಕೆಯಲ್ಲಿ ಅಮೂಲ್ಯ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಳು. ಈ ಘಟನೆ ಈಗ ವಿವಾದ ಸೃಷ್ಟಿಸಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಮೂಲ್ಯ ವಿರುದ್ಧ ದೇಶದ್ರೋಹದ ಕೇಸ್ ದಾಖಲಾಗಿದೆ.

ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಅಮೂಲ್ಯ ಲಿಯೋನಾ ಅನ್ನೋ ಯುವತಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಇಂದು ಪೊಲೀಸರು ಕಾರ್ಯಕ್ರಮದ ಆಯೋಜಕರನ್ನ ವಿಚಾರಣೆಗೆ ಒಳಪಡಿಸಲಿದ್ದಾರೆ.

ಆಯೋಜಕರಾದ ಇಮ್ರಾನ್ ಪಾಷ ಹಾಗೂ ಎಂಐಎಂ ಪಕ್ಷದ ಸ್ಥಳೀಯ ಮುಖಂಡ ಇಬ್ರಾಹಿಂಗೆ ನಿನ್ನೆ ಉಪ್ಪಾರಪೇಟೆ ಪೊಲೀಸರು ನೋಟಿಸ್ ನೀಡಿದರು. ಇಂದು ಅವರಿಬ್ಬರೂ ವಿಚಾರಣೆಗೆ ಹಾಜರಾಗಿ, ಹೇಳಿಕೆ ನೀಡೋ ಸಾಧ್ಯತೆ ಇದೆ.

ಸದ್ಯ ಅಮೂಲ್ಯ ಲಿಯೋನಾ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಪ್ರಕರಣ ಸಂಬಂಧ ಆಯೋಜಕರ ವಿರುದ್ಧವೂ ಕ್ರಮ ಕೈಗೊಳ್ಳೋ ಸಾಧ್ಯತೆ ಇದೆ.

 

Related