ಆಟೋ-ಟ್ಯಾಕ್ಸಿ ಚಾಲಕರಿಗೆ  ಪ್ಯಾಕೇಜ್

ಆಟೋ-ಟ್ಯಾಕ್ಸಿ ಚಾಲಕರಿಗೆ  ಪ್ಯಾಕೇಜ್

ಬೆಂಗಳೂರು: ಕೊರೋನಾ ಹಿನ್ನಲೆ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜಿನ ನಿಯಮಾವಳಿಗಳನ್ನು ಸರಳೀಕರಣ ಗೊಳಿಸುವಂತೆ ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣಸವದಿ ಸೂಚನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ, ದಿನೇಶ್‍ಗುಂಡೂರಾವ್, ಸರ್ಕಾರ ಚಾಲಕರ ಕುಟುಂಬಕ್ಕೆ 5 ಸಾವಿರ ರೂ. ಕೊಡುವುದಾಗಿ ಘೋಷಣೆ ಮಾಡಿದೆ.  ಹಣ ತಲುಪಿಲ್ಲ. ಅರ್ಜಿ ಕೂಡ ಆಹ್ವಾನಿಸಿಲ್ಲ. ಅನಗತ್ಯವಾಗಿ ದಾಖಲಾತಿಗಳನ್ನು ಕೇಳಲಾಗಿದೆ. ಷರತ್ತು ವಿಪರೀತವಾಗಿವೆ.

ವಾಹನಗಳ ಸಂಖ್ಯೆ ಮತ್ತು ಫಿಟ್‍ನೆಸ್ ಸರ್ಟಿಫಿಕೇಟ್ ಪಡೆದುಕೊಳ್ಳುವ ಅಗತ್ಯವಿಲ್ಲ. ಬಹಳಷ್ಟು ಚಾಲಕರಿಗೆ ಸ್ವಂತ ವಾಹನ ಇಲ್ಲ. ಎರವಲು ಪಡೆದು ಓಡಿಸುತ್ತಿರುತ್ತಾರೆ. ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿರುವುದು ಚಾಲಕರಿಗಾಗಿ. ವೃತ್ತಿ ಆಧಾರಿತ ಚಾಲಕರಿಗೆ ಮೊದಲ ಆದ್ಯತೆ ನೀಡಬೇಕೆಂದು ಚರ್ಚೆ ವೇಳೆ ಪದಾಧಿಕಾರಿಗಳು ಸಲಹೆ ನೀಡಿದರು.

ಕಾಂಗ್ರೆಸ್‍ನ ಶಾಸಕ ದಿನೇಶ್‍ಗುಂಡೂರಾವ್ ನೇತೃತ್ವದಲ್ಲಿ ಆದರ್ಶ ಆಟೋ ಚಾಲಕರ ಸಂಘ, ವೋಲಾ, ಊಬರ್ ಆಟೋ ಚಾಲಕರ ಸಂಘದ ಪದಾಧಿಕಾರಿಗಳ ಜತೆ ಸಭೆ ನಡೆಸಿದ ಸಚಿವರು, ಸಾರಿಗೆ ಇಲಾಖೆ ಅಧಿಕಾರಿಗಳು ವಿಧಿಸಿರುವ ನಿಯಮಾವಳಿಗಳ ಬಗ್ಗೆ ತೀವ್ರ ಆಕ್ಷೇಪ  ವ್ಯಕ್ತಪಡಿಸಿದರು.

 

 

 

Related