ಶರಣರ ನೇತೃತ್ವದಲ್ಲಿ ಸಾಹಿತ್ಯ ಕಾರ್ಯಕ್ರಮಗಳ ಆಯೋಜನೆ

ಶರಣರ ನೇತೃತ್ವದಲ್ಲಿ ಸಾಹಿತ್ಯ ಕಾರ್ಯಕ್ರಮಗಳ ಆಯೋಜನೆ

ತಾಳಿಕೋಟೆ – ಕಳೆದ 15 ವರ್ಷಗಳಿಂದ ಜಿಲ್ಲೆಯ ಸ್ವಾಮೀಜಿಗಳಿಗೆ ಸಾಹಿತ್ಯ ಪರಿಷತ್ತಿನಲ್ಲಿ ಅವಕಾಶಗಳು ಸಿಕ್ಕಿಲ್ಲ. ಕಾರ್ಯಕ್ರಮಗಳಿಗೂ ಸಹ ಸೌಜನ್ಯಕ್ಕೂ ಕರೆಯದೇ ಕಾರ್ಯಕ್ರಮಗಳು ನಡೆದಿವೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸ್ವಾಮೀಜಿಗಳನ್ನು ಸಾಹಿತ್ಯ ಪರಿಷತ್ ಚಟುವಟಿಕೆಗಳಲ್ಲಿ ಸಕ್ರೀಯವಾಗಿಸಿ ಅವರ ನೇತೃತ್ವದಲ್ಲಿ ಕಸಾಪ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗುವದು ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ, ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಅಧ್ಯಕ್ಷ ಹಾಂಸಿಪೀರ ವಾಲೀಕಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಸಾಪ ಚುನಾವಣೆಗಳು ಕೋವಿಡ್ ಹಿನ್ನಲೆಯಲ್ಲಿ ಮೂಂದೂಡಲ್ಪಟ್ಟಿದೆ. ನವೆಂಬರ್-ಡಿಸೆಂಬರ್ ತಿಂಗಳಲ್ಲಿ ನಡೆಯಲಿದ್ದು, ಜಿಲ್ಲೆಯಲ್ಲಿ ನಿರಂತರವಾಗಿ ಪರಿಷತ್ತಿನ ಸದಸ್ಯರಿಗೆ ಭೇಟಿ ಮಾಡುತ್ತ ಸಂಪರ್ಕದಲ್ಲಿದ್ದೇನೆ. ಜಿಲ್ಲೆಯಲ್ಲಿ 16 ಸಾಹಿತ್ಯ ಪರಿಷತ್ತಿನ ಮತಗಟ್ಟೆಗಳಿವೆ ಎಲ್ಲ ಮತಗಟ್ಟೆಗಳ ಸಾಹಿತಿಗಳ ಪರಸ್ಪರ ಭೇಟಿ ಮಾಡಿ ಮುಂಬರುವ ದಿನಗಳಲ್ಲಿ ಸಾಹಿತ್ಯ ಪರಿಷತ್ತಿನಿಂದ ಆಗುವ ಕಾರ್ಯಗಳ ಬಗ್ಗೆ ಚರ್ಚೆ ಮಾಡಿದ್ದೇನೆ.

ನಾನು ನನ್ನ ತಂಡ ಎಲ್ಲ ಪೂಜ್ಯರನ್ನು, ಸ್ವಾಮೀಜಿಗಳನ್ನು ಪ್ರತಿ ಕಾರ್ಯಕ್ರಮದಲ್ಲಿ ಅವರ ಸಲಹೆ ಮಾರ್ಗದರ್ಶನ ಪಡೆಯುವ ಯೋಚನೆ ಮಾಡಿದ್ದೇನೆ. ನನ್ನ ಚುನಾವಣೆಗೆ ಜಿಲ್ಲೆಯ ಸ್ವಾಮೀಜಿಗಳು ಶರಣರು ಬೆಂಬಲಿಸಿ ಆಶೀರ್ವದಿಸಿದ್ದಾರೆ. ಜಿಲ್ಲೆಯ ಎಲ್ಲ ವರ್ಗದ ಸಾಹಿತ್ಯ ಪ್ರತಿಭೆಗಳಿಗೆ ಅತ್ಯಂತ ಅರ್ಹವಾದಂತಹ ವೇದಿಕೆಯ ಅವಕಾಶಗಳನ್ನು ಕಲ್ಪಿಸಿ ಅವರ ಘನತೆ ಗೌರವವನ್ನು ಹೆಚ್ಚಿಸುವಂತ ಚಿಂತನೆಯನ್ನು ಮಾಡಿದ್ದೇನೆ. ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ತಾಲೂಕು, ಹೋಬಳಿ, ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯಸಾಕ್ತರನ್ನು ಗುರುತಿಸಿ ಸಾಹಿತ್ಯ ಬೆಳೆಸುವ ಸಂಕಲ್ಪ ಮಾಡಿದ್ದೇನೆ. ಜಿಲ್ಲೆಯಲ್ಲಿ ಶರಣರ ಸಂಸ್ಕೃತಿಯನ್ನು ಜನರಿಗೆ ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡುವಲ್ಲಿ ನಮ್ಮ ತಂಡ ಯೋಜನೆಯನ್ನು ರೂಪಿಸಿದೆ. ಜಿಲ್ಲೆಯಲ್ಲಿ ಸಾಹಿತಿಗಳು, ಕನ್ನಡಾಭಿಮಾನಿಗಳು ಅತ್ಯಂತ ಉತ್ಸಾಹದಿಂದ ಚುನಾವಣೆಯನ್ನು ಎದುರಿಸುವ ಕಾಯಕವನ್ನು ಮಾಡುತ್ತಿದ್ದಾರೆ.

ಚಿತ್ರದುರ್ಗದ ಮುರುಘಾ ಶರಣರು ಶೂನ್ಯಪೀಠ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ವತಿಯಿಂದ ಚಿಂತನಾ ಗೋಷ್ಠಿಯನ್ನು 20 ವರ್ಷಗಳಿಂದ ಮಾಡುತ್ತ ಬಂದಿರುವುದನ್ನು ಗುರುತಿಸಿ ಬೆಂಗಳೂರಿನ ನಿಡುಮಾಮಿಡಿ ಡಾ. ವೀರಬದ್ರ ಚೆನ್ನಮಲ್ಲ ಸ್ವಾಮೀಜಿ ಮಾನವತಾ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದ್ದಾರೆ. ನಾನು ಕನ್ನಡ ಪಂಡಿತನಾಗಿರುವುದರಿಂದ ಹಾಗೂ ನಾಲ್ಕು ಸ್ನಾಕೋತ್ತರ ಪದವಿ ಪಡೆದಿರುವುದರಿಂದ ಕಸಾಪ ಚುನಾವಣೆಗೆ ನಾನು ಅರ್ಹನೆಂದು ಭಾವಿಸಿ ಸ್ಪರ್ಧಿಸಿದ್ದೇನೆ. ಜಿಲ್ಲೆಯಾದ್ಯಂತ ಉತ್ತಮ ಪತ್ರಿಕ್ರಿಯೆ, ಬೆಂಬಲ ದೊರಕುತ್ತಿದೆ. ಚುನಾವಣೆಗೆ ನಾನು ಸಂಪೂರ್ಣ ಸಿದ್ಧವಾಗಿದ್ದೇನೆ ಎಂದು ಹೇಳಿದರು.

Related