ಅಧಿಕಾರಿಗಳು ನೆಪ ಹೇಳದೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು:‌ ಕೆಎಚ್ ಮುನಿಯಪ್ಪ

ಅಧಿಕಾರಿಗಳು ನೆಪ ಹೇಳದೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು:‌ ಕೆಎಚ್ ಮುನಿಯಪ್ಪ

ಬೆಂಗಳೂರು: ಜಿಲ್ಲಾ ಮಟ್ಟದ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯನ್ನು ಇಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆಹೆಚ್. ಮುನಿಯಪ್ಪನವರು ನಡೆಸಿದರು. ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಎಲ್ಲಾ ಅಧಿಕಾರಿಗಳೊಂದಿಗೆ ಇಲಾಖಾವಾರು ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿದರು.

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಸಮರ್ಪಕವಾಗಿ ನೀರು ಮತ್ತು ಮೇವಿನ ಸಮಸ್ಯೆ ಎದುರಾಗದೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಹಾಸ್ಟೆಲ್ ಗಳ ನಿರ್ಮಾಣದ ಕಾರ್ಯ ಶೀಘ್ರವಾಗಿ ಮುಗಿಯಬೇಕು. ರಸ್ತೆಗಳ ನಿರ್ಮಾಣದಲ್ಲಿ 50 ವರ್ಷಗಳ ದೂರದೃಷ್ಟಿ ಯಲ್ಲಿ ಸರಿಯಾದ ಯೋಜನೆ ರೂಪಿಸಿ ನಿರ್ಮಿಸಬೇಕಾಗುತ್ತದೆ ತರಾತುರಿಯಲ್ಲಿ ನಿರ್ಮಾಣಮಾಡಬಾರದು ಇದರಲ್ಲಿ ನಾನು ಕೇಂದ್ರದ ಭೂಸಾರಿಗೆ ಸಚಿವನಾಗಿ ಅನುಭವ ಇರುವುದರಿಂದ ರಸ್ತೆಗಳ ನಿರ್ಮಾಣದಲ್ಲಿ ಬಹಳ ಗುಣಮಟ್ಟ ಹಾಗೂ ಇನ್ನಿತರೆ ಸ್ಥಳಗಳಿಗೆ ಸಂಪರ್ಕವಾಗುವ ರೀತಿಯಲ್ಲಿ ಕ್ರಿಯಾ ಯೋಜನೆಮಾಡಿ   ನನ್ನ ಗಮನಕ್ಕೆ ತಂದು ಜಾರಿಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು‌.

ಹೋಸ ರಸ್ತೆಗಳು ನಾಲ್ಕು ತಾಲ್ಲೂಕಿನಲ್ಲಿ ಯಾವ ಹಳ್ಳಿಗಳಿಗೂ ತೊಂದರೆಯಾಗದಂತೆ (ಪೂಣಾ, ನೆಲಮಂಗಲ, ಚೆನೈ) ಕಡೆ ಹೊರಡುವ ಮಾರ್ಗಗಳಿಗೆ  ಸಂಬಂಧಿಸಿದಂತೆ ಕ್ರಮವಹಿಸಬೇಕು  ಭಾರಿವಾಹಣಗಳು ಟೋಲ್ ಅನ್ನು ತಪ್ಪಿಸಲು ಅಡ್ಡ ದಾರಿಗಳಲ್ಲಿ ಹೊಗುವುದು ಕಂಡುಬಂದಿದ್ದು ಇದರ ಬಗ್ಗೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ:

ಕೃಷಿ ಇಲಾಖೆಯವತಿಂದ ರೈತರಿಗೆ ಗೊಬ್ಬರ, ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ತೊಂದರೆ ಯಾಗದಂತೆ ನೀಡಬೇಕು ಜಿಲ್ಲೆಯಲ್ಲಿನ ಪ್ರಗತಿಯ ವಿಚಾರಗಳ ಮಾಹಿತಿಯನ್ನು ಶಾಸಕರ ಗಮನಕ್ಕೆ ಕಾಲ ಕಾಲಕ್ಕೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು ಅಧಿಕಾರಿಗಳು ಇದರಲ್ಲಿ ಯಾವುದೇ ತಾರತಮ್ಯವನ್ನು ಮಾಡದೆ ಎಲ್ಲಾ‌ ಜನರಿಗೂ ಸೌಲಭ್ಯ ವನ್ನು ತಲುಪಿಸಬೇಕು ಎಂದರು. ಜಿಲ್ಲೆಯಲ್ಲಿ ರೈತರ  ಜಮೀನುಗಳನ್ನು ಪೋಡಿ ಮುಕ್ತ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ:ಇಷ್ಟಾರ್ಥಗಳ ಈಡೇರಿಸುವ ಕಂಬಳಿಪುರದ ಕಾಟೇರಮ್ಮ..!

ಬೆಳಗಾನೆ ರೈತರು ಕಛೇರಿಗಳಿಗೆ ತಿರುಗುವುದನ್ನು ಕಡಿಮೆ ಮಾಡಲು ಅಧಿಕಾರಿಗಳು ಅವರ ಸಮಸ್ಯೆಗಳನ್ನು ಬಗೆಹರಿಸಬೇಕು. ಪ್ರತಿ ತಾಲ್ಲೂಕಿನಲ್ಲಿ ರುದ್ರ ಭೂಮಿಯ ಜಾಗಕ್ಕೆ ಸರಿಯಾದ ಕಾಂಪೌಂಡ್ ಹಾಗೂ ಮುಲ್ಲಿನ ತಂತಿಯನ್ನು ಹಲವಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಹೊಸಕೋಟೆ ಶಾಸಕ ಶರತ್ ಕುಮಾರ್ ಬಚ್ಚೇಗೌಡ, ದೊಡ್ಡ ಬಳ್ಳಾಪುರ ಶಾಸಕ ದೀರಜ್ ಮುನಿರಾಜು, ನೆಲಮಂಗಲ ಶಾಸಕ ಶ್ರೀನಿವಾಸ,ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜಣ್ಣ,ಬಯ್ಯಪ್ಪಾ ಅಧ್ಯಕ್ಷರಾದ ಶಾಂತಕುಮಾರ್, ಪ್ರಾಧಿಕಾರದ ಅಧ್ಯಕ್ಷರು ಸದಸ್ಯರು, ಜಿಲ್ಲಾಧಿಕಾರಿ ಡಾ. ಶಿವಶಂಕರ್, ಜಿಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಅನುರಾಧ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್ ನಟರಾಜ್, ಅಪರ ಜಿಲ್ಲಾಧಿಕಾರಿ ಅಮರೇಶ್, ಪೋಲಿಸ್ ವರಿಷ್ಠಾಧಿಕಾರಿ ಸಿಕೆ.ಬಾಬಾ, ಉಪ ಕಾರ್ಯದರ್ಶಿ ರಮೇಶ್, ಅಧಿಕಾರಿಗಳು ಉಪಸ್ಥಿತರಿದ್ದರು.

Related