ಆಸ್ಪತ್ರೆ ಸಿಬ್ಬಂದಿಗಿಲ್ಲ ವೇತನ

ಆಸ್ಪತ್ರೆ ಸಿಬ್ಬಂದಿಗಿಲ್ಲ ವೇತನ

ಆನೇಕಲ್ , ಮಾ. 22: ಮೂರು ತಿಂಗಳಾದ್ರು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೆ ಇಲ್ಲ ಸಂಬಳ. ಆನೇಕಲ್ ನ ಸರಕಾರಿ ಆಸ್ಪತ್ರೆಯ ಸಿಬ್ಬಂದಿಯ ಪಾಡು ಕೇಳೋರು ಯಾರು. ಸರ್ಕಾರ ಒಂದೆಡೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳು ರಜೆ ಹಾಕದೆ ಕೆಲಸ ಮಾಡಿ ಅಂತರೇ. ಆದರೆ ಮೂರು ತಿಂಗಳಿಂದ ಸಂಬಳವಿಲ್ಲದೆ ಇರೋದನ್ನ ಕೇಳೋರು ಯಾರು. ಗ್ರೂಪ್ ಸಿ ಹಾಗು ಗ್ರೂಪ್ ಡಿ ನೌಕರರಿಗೆ ಸಂಬಳ‌ ನೀಡದೆ ಸತಾಯಿಸುತ್ತಿರುವ ಸರ್ಕಾರ. ಸಂಬಳವಿಲ್ಲದೆ ಬೇಸತ್ತು ಜಿಲ್ಲಾ ಆರೋಗ್ಯಾಧಿಕಾರಿಗೆ ಪತ್ರ ಬರೆದಿರುವ ಸಿಬ್ಬಂದಿಗಳು.

ಕೇವಲ‌ ವೈದ್ಯರಿಗೆ ಮಾತ್ರ ಸಂಬಳ, ಆಗಿರುವ ಸಿಬ್ಬಂದಿಗೆ ಯಾಕಿಲ್ಲ ಸಂಬಳ … ಕೇಳಲು ಹೋದರೆ ಬಜೆಟ್ ಸಮಸ್ಯೆ ಎಂಬ ನೆಪ‌ ಹೇಳುತ್ತಿರುವ ಕ್ಲರ್ಕ್ ಮತ್ತು ಆಡಳಿತ ಅಧಿಕಾರಿ.

ಕೋರೊನಾ ಹಿನ್ನೆಲೆ ಆಸ್ಪತ್ರೆಯಲ್ಲಿ ರಾತ್ರಿ-ಹಗಲು ಕೆಲಸ  ಮಾಡುತ್ತಿರುವ ಸಿಬ್ಬಂದಿ. ಜಿಲ್ಲಾ ವೈದ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ನಮಗೆ ಸಂಬಳ ಕೊಡಿಸಿ ಅಂತ ಮನವಿ.

ರೋಗಿಗಳಿಗೆ ಯಾವುದೇ ತೊಂದರೆ ಆಗಬಾರದು ಅಂತ ನಾವು ದಿನ ಕೆಲಸ ಮಾಡುತ್ತಿದ್ದೇವೆ ಆದರೆ ನಮಗೆ ಮಾತ್ರ ಸಂಬಳ ನೀಡುತ್ತಿಲ್ಲ.

ಮುಂದಿನ ದಿನಗಳಲ್ಲಿ  ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Related