ಸೌಂದರ್ಯ ಮತ್ತು ಚೈತನ್ಯ ಬೇಕ…..ಇಲ್ಲಿದೆ ಭೂ ಲೋಕದ ಸಂಜೀವಿನಿ

ಸೌಂದರ್ಯ ಮತ್ತು ಚೈತನ್ಯ ಬೇಕ…..ಇಲ್ಲಿದೆ ಭೂ ಲೋಕದ ಸಂಜೀವಿನಿ

ಸ್ನೇಹಿತರೆ ನಾವು ಇವತ್ತಿನ ಈ ಲೇಖನದಲ್ಲಿ ಭೂ ಲೋಕದ ಅಮೃತ ಸಂಜೀವಿನಿ ಎಂದೆ ಪ್ರಸಿದ್ಧಿಯಾಗಿರುವ ಎಳೆ ನೀರಿನ ಬಗ್ಗೆ ತಿಳಿಯೋಣ. ಎಳೆನೀರು ಸೇವೆನೆಯಿಂದ  ಸೌಂದರ್ಯ ಮತ್ತು ಚೈತನ್ಯ ನೀಡುವಲ್ಲಿ ಅನುಮಾನವೇ ಇಲ್ಲ.

ಹೌದು, ಎಳೆನೀರು ಸೇವನೆಯಿಂದ ಮನುಷ್ಯನ ದೇಹದ ಅರೋಗ್ಯಕ್ಕೆ ಯಾವೆಲ್ಲ ರೀತಿಯ ಆರೊಗ್ಯಕರ ಹಾಗೂ ಪ್ರಯೋಜನಗಳಿವೆ ಎಂದು ನಾವಿಂದು ತಿಳಿಯೋಣ. ಈ ಎಲ್ಲ ಆರೋಗ್ಯಕರ ಸಲಹೆ ಸೂಚನೆಗಳನ್ನುಸರಿಯಾಗಿ ತಿಳಿದುಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು,

ಗೆಳೆಯರೆ ಸಮಯ ವ್ಯರ್ಥಮಾಡದೆ ವಿಷಯಕ್ಕೆ ಬಂದು ಬಿಡೋಣ, ಭೂ ಲೋಕದಲ್ಲಿ ಅಮೃತ ಸಂಜೀವಿನಿ ಎಂದೇ ಪ್ರಖ್ಯಾತಿಯಾಗಿರುವ ಎಳೆ ನೀರು ಸಾಮನ್ಯವಾಗಿ ನಮ್ಮ ದೇಹವನ್ನು ಕಾಡುವ ಅನೇಕ ಕಾಯಿಲೆಗಳಿಗೆ ದಿವ್ಯ ಔಷಧಿಯೂ ಕೂಡ ಹೌದು.

ಬಳಲಿ ಬೆಂಡಾದ ದೇಹಕ್ಕೆ ಕೆಲವೇ ನಿಮಿಷಗಳಲ್ಲಿ ಹೊಸ ಚೈತನ್ಯ ನೀಡುವ ನೈಸರ್ಗಿಕ  ಔಷಧಿ ಹೌದು. ಇದು ಬೇಸಿಗೆಯ ಬಿಸಿಲಿಗೆ ಒಣಗಿದ ಬಾಯಿಯನ್ನು ತಂಪು ಮಾಡಿ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಡಬಲ್ಲ ಶಕ್ತಿ ಈ ಎಳೆ ನೀರಿಗಿದೆ.

ಬಾಯರಿಕೆಯನ್ನು ತಣಿಸುವ ತಂಪು ಪಾನಿಯವಾಗಿ ಹಾಗೂ ಸೌಂದರ್ಯವನ್ನು ಹೆಚ್ಚಿಸುವ ಸೌಂದರ್ಯವರ್ಧಕವಾಗಿ, ಅನಾರೋಗ್ಯದಿಂದ ಬಳಲುತಿದ್ದರೆ ಔಷದರೂಪದಲ್ಲಿ ಚೈತನ್ಯ ನೀಡುವ ಏಕೈಕ ನಿಸರ್ಗ ಔಷದಿ ಈ ಅಮೃತ ಎಳೆ ನೀರು. ಇದನ್ನು ಸೇವಿಸುವುದರಿಂದ ದೇಹದಲ್ಲಿ ಮಹತ್ತರವಾದ ಬದಲಾವಣೆ ಹಾಗೂ ನವ ಚೈತನ್ಯವನ್ನು ಕಾಣಬಹುದಾಗಿದೆ.

ಸಾಮನ್ಯವಾಗಿ ಮನುಷ್ಯ 40 ರ ವಯಸ್ಸಿನ ನಂತರ ಒತ್ತಡಕ್ಕೊಳಗಾಗುವುದು ಸಹಜ. ಇದರಿಂದ ರಕ್ತದ ಒತ್ತಡ ಜಾಸ್ತಿಯಾಗುತ್ತದೆ, ಈ ಎಳೆ ನೀರು ಸೇವೆನೆಯಿಂದ ರಕ್ತದೊತ್ತಡ ನಿಯಂತ್ರನದಲ್ಲಿಡಲು ಸಹಕಾರಿಯಾಗುತ್ತದೆ. ಹೃದಯ ಸಮಸ್ಯೆಯಿಂದ ಬಳಲುವವರು ಕೂಡ ನೈಸರ್ಗಿಕವಾದ ಈ ಎಳೆ ನೀರನ್ನು ಸೇವಿಸ ಬಹುದಾಗಿದೆ, ದೇಹದಲ್ಲಿ ದುರ್ಬಲ ವಿಷಕಾರಿ ವಸ್ತುಗಳನ್ನು ಹಾಗೂ ಅನಗತ್ಯ ಸಂಗ್ರಹಗೊಂಡ ಕೊಬ್ಬನ್ನು ಹೊರ ಹಾಕುತ್ತದೆ.

ಈ ಎಳೆ ನೀರನ್ನು ಅಂದರೆ ತೆಂಗಿನ ಗಿಡಗಳನ್ನು ಸಮುದ್ರದ ದಂಡೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಮಂಡ್ಯ. ಮದ್ದೂರು, ಮೈಸೂರು, ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.

ಎಳೆನೀರು ಸೇವೆನೆಯಿಂದ ದೇಶದ ತೆಂಗು ಬೆಳೆಯುವ ರೈತನಿಗೂ ಒಳ್ಳೇದು. ಎಳೆನೀರು ಸೇವಿಸುವ ಗ್ರಾಹಕನಿಗೂ ಒಳ್ಳೆಯ ಆರೋಗ್ಯ ಸಿಗುತ್ತದೆ ಅಲ್ವ. ಬನ್ನಿ ವಿದೇಶಿ ಪಾನಿಯಗಳನ್ನು ಇಂದೇ ಬಿಟ್ಟು ಬಿಡೋಣ ದೇಶದ ಬೆನ್ನೆಲುಬು ಎಂದೇನಿಸಿ ಕೊಂಡಿರುವ ರೈತನ ಜೊತೆಗೆ ನಿಲ್ಲೋಣ.

ವರದಿಗಾರ

ಎ.ಚಿದಾನಂದ

Related