ನರೇಗಾ ಕಾಮಗಾರಿಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ

ನರೇಗಾ ಕಾಮಗಾರಿಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ

ಚಿಕ್ಕಬಳ್ಳಾಪುರ : ದೇಶದ ನರೇಗಾ ಕಾಮಗಾರಿಗಳಲ್ಲಿ ನಮ್ಮ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ ಎಂದು ಹೇಳಲು ಹರ್ಷವಾಗುತ್ತಿದೆ. ನಿರೀಕ್ಷೆಗೂ ಮೀರಿ ರಾಜ್ಯದ ಕೂಲಿ ಕಾರ್ಮಿಕರು ನರೇಗಾ ಕಾಮಗಾರಿಗಳಲ್ಲಿ ಪಾಲ್ಗೊಂಡಿದ್ದಾರೆ ಹೀಗಾಗಿ ನರೇಗಾ ಕಾಮಗಾರಿಗಳಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಸಿಕ್ಕಂತಾಗಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಗವಿಗಾನಹಳ್ಳಿ ಬಳಿ ಅಂತರ್ಜಲ ಚೇತನ ಯೋಜನೆಯಡಿ ನದಿ ಪುನಃಶ್ಚೇತನಕ್ಕಾಗಿ ಸುಮಾರು 5760 ಕಾಮಗಾರಿಗಳು, ಜಲಾಮೃತ -ಜಲಾನಯನ ಅಭಿವೃದ್ಧಿಯಡಿ 2129 ಹಾಗೂ ಜಲ ಸಂರಕ್ಷಣೆಯಡಿ 8090 ಕಾಮಗಾರಿಗಳು ಸೇರಿದಂತೆ ಒಟ್ಟಾರೆ 15979 ಕಾಮಗಾರಿಗಳಿಗೆ ಚಾಲನೆ ನೀಡಿದರು.

ರಾಜ್ಯದಲ್ಲಿ ಸರ್ಕಾರದ ನಿರೀಕ್ಷೆಗೆ ಮೀರಿ ಕೂಲಿ ಕಾರ್ಮಿಕರು ನರೇಗಾ ಕಾರ್ಯದಲ್ಲಿ ಪಾಲ್ಗೊಂ ಡಿದ್ದಾರೆ ಹೀಗಾಗಿ ಅವರಿಗೂ ಅನುಕೂಲವಾಗಿದೆ ಅಂತೆಯೇ ಜಿಲ್ಲೆಯ ಅಂತರ್ಜಲ ವೃದ್ದಿಸುವ ಕಾಮಗಾರಿಗಳು ಪುನಃಶ್ಚೇತನಗೊಂಡಂತಾಗಿವೆ ಎಂದ ಅವರು 48.67 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯಲಿವೆ ಎಂದರು.

ಬೆಂಗಳೂರಿನ ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಸಹಯೋಗದೊಂದಿಗೆಜಿಲ್ಲೆಯಲ್ಲಿ ಬತ್ತಿಹೋದ ನದಿಗಳು, ಕೆರೆ-ಕುಂಟೆಗಳು, ಕೊಳವೆ ಬಾವಿಗಳ ಪುನಶ್ಚೇತನಕ್ಕಾಗಿ ಈ ಕಾಮಗಾರಿಗಳು ನಡೆಯಲಿವೆ. ಜಿಲ್ಲೆಯ 15000 ಕುಟುಂಬಗಳಿಗೆ ನರೇಗಾ ಯೋಜನೆಯಡಿ ಉದ್ಯೋಗ ಸಿಗುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ 1200-1500 ಅಡಿಗಳ ಆಳದವರೆಗೆ ಕುಸಿದಿರುವ ಅಂತರ್ಜಲ ಮಟ್ಟ ವೃದ್ದಿಸಲು ಈ ಯೋಜನೆಗಳು ಪೂರಕವಾಗಿವೆ. ಈ ಯೋಜನೆಯಡಿಯಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ ಮಾಡಿಕೊಳ್ಳಬಹುದು. ಅಲ್ಲದೆ ಬಾಳೆ, ಪಪ್ಪಾಯ, ದ್ರಾಕ್ಷಿ ಮತ್ತಿತರ ಬೆಳೆಗಳಿಗೆ ಸಹಕಾರಿ, ಅಂತರ್ಜಲ ವೃದ್ದಿಗೂ ನರೇಗಾ ಸಹಕಾರಿಯಾಗಿದೆ ಎಂದರು.

Related