ನಡಹಳ್ಳಿಗೆ ಸಚಿವ ಸ್ಥಾನಕ್ಕೆ ಆಗ್ರಹ

ನಡಹಳ್ಳಿಗೆ ಸಚಿವ ಸ್ಥಾನಕ್ಕೆ ಆಗ್ರಹ

ಮುದ್ದೇಬಿಹಾಳ – ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರನ್ನು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮಂತ್ರಿ ಮಂಡಲದಲ್ಲಿ ಸಚೀವ ಸ್ಥಾನ ನೀಡಿ ಗೌರವಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಪುರಸಭೆ ಸದಸ್ಯರು ಹಾಗೂ ನಾಮ ನಿರ್ದೇಶಕ ಸದಸ್ಯರು ಒತ್ತಾಯಿಸಿದರು.

ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಹಾಗೂ ನಾಮ ನಿರ್ದೇಶಕ ಸದಸ್ಯ ರಾಜಶೇಖರ ಹೊಳಿಯವರು ಮಾತನಾಡಿ, ಕಳೇದ ಮೂರು ಬಾರಿ ಹ್ಯಾಟ್ರೀಕ ಗೆಲುವು ಸಾಧಿಸುವ ಮೂಲಕ ಶಾಸಕರಾಗಿ ಆಯ್ಕೆಯಾಗಿ ಹಿರಿಯ ಅನುಭವಿ ರಾಜಕಾರಣಿಯಾಗಿದ್ದಾರೆ. ಕಳೆದ 30 ವರ್ಷಗಳಿಂದ ಸಂಪೂರ್ಣ ಅಭಿವೃದ್ಧಿಯಿಂದ ವಂಚಿತಗೊಂಡಿದ್ದು ಮಾತ್ರವಲ್ಲದೇ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಎಲ್ಲೇಡೆ ಸಿ ಸಿ ರಸ್ತೆ, ಚರಂಡಿ, ಉದ್ಯಾನವನಗಳ ಅಭಿವೃದ್ಧಿ, ಮೂಲಭೂತ ಸೌಲಭ್ಯಗಳು ಸೇರಿದಂತೆ ಹಲವು ಅಭಿವೃದ್ಧಿ ಪೂರಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮಾದರಿಯ ಕ್ಷೇತ್ರವನ್ನಾಗಿ ಮಾಡುವ ಪ್ರಯತ್ನಿಸಿದ್ದಾರೆ ಎಂದರು.

ಈ ವೇಳೆ ಸದಸ್ಯೆ ಸಹನಾ ಬಡಿಗೇರ ಮಾತನಾಡಿ, ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್, ಮಾಸ್ಕ್ ಸ್ಯಾನಿಟೈಜರ್ ವಿತರಣೆ, 600 ಗಳವೆರೆಗೆ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಮಹಾದೇವಿ ಪಾಟೀಲ್(ನಡಹಳ್ಳಿ), ಮಗ ಭರತ್ ಗೌಡ, ಶಾಸಕ ಎ ಎಸ್ ಪಾಟೀಲ್(ನಡಹಳ್ಳಿ) ಎಲ್ಲ ಜನಸೇವೆಗೆ ಪಟ್ಟಣದ ಅಭಿವೃದ್ಧಿಗೆ ಅವರ ಬೆನ್ನ ಹಿಂದೆ ನಿಂತು ಎಲ್ಲ ರೀತಿಯ ಸಹಕಾರ ಸ್ಪೂತಿ ತುಂಬಿದ್ದಾರೆ. ಕೋರೊನಾ ಸಂದರ್ಭದಲ್ಲಿ ಗಡಿ ನಾಡಿನ ಭಾಗದಲ್ಲಿ ಮತ್ತು ನೆರೆ ರಾಜ್ಯಗಳಿಗೆ ದುಡಿಯಲು ಗುಳೆ ಹೋಗಿದ್ದ ಜನರು ಸಂಕಷ್ಟದಲ್ಲಿ ಸಿಲುಕಿರುವುದನ್ನು ಮನಗಂಡು ಕೂಲಿ ಕಾರ್ಮಿಕ ಕುಟುಂಬಗಳನ್ನು ಮತ್ತೆ ವಾಪಸ್ ಅವರವರ ಸ್ವಗ್ರಾಮಗಳಿಗೆ ಮರಳಿ ಸೇರುವಂತೆ ಮಾಡಿದ್ದಲ್ಲದೇ ಅವರಿಗೇ ಎರಡು ತಿಂಗಳಿಗಗೂವಷ್ಟು ಉಚಿತ ದಿನಸಿ ಆಹಾರ ಧಾನ್ಯಗಳ ಕಿಟ್ ನೀಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ.
ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಾಸಕ ಎ ಎಸ್ ಪಾಟೀಲ್(ನಡಹಳ್ಳಿ)ಯವರನ್ನು ಈ ಬಾರಿಯಾದರೂ ಸಚೀವರನ್ನಾಗಿ ಮಾಡಿದರೇ ಇಡೀ ಉತ್ತರ ಕರ್ನಾಟಕ್ಕೆ ಗೌರವತಂದುಕೊಂಟ್ಟಂತಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯಯ ಚನ್ನಪ್ಪ ಕಂಠಿ, ಮುತ್ತು ತಟ್ಟಿ, ಅಶೋಕ ವನಹಳ್ಳಿ, ನಾಮನಿರ್ಧೇಶಿತರಾದ ಸುನೀಲ ಹಡ್ಲಗೇರಿ, ಹುಲಗಪ್ಪ ನಾಯಕಮಕ್ಕಳ, ಗಣ್ಯರಾದ ವಿಜಯ ಬಡಿಗೇರ, ಉದಯ ರಾಯಚೂರ ರಾಜು ಬಳ್ಳೋಳಿ, ಪ್ರಭು ಕಡಿ ಇತರರು ಇದ್ದರು.

Related