ಮಕ್ಕಳೊಂದಿಗೆ ತಾಯಿ ವಿಷಸೇವಿಸಿ ಆತ್ಮಹತ್ಯೆ

ಮಕ್ಕಳೊಂದಿಗೆ ತಾಯಿ ವಿಷಸೇವಿಸಿ ಆತ್ಮಹತ್ಯೆ

ಹೈದರಾಬಾದ್  : ತಾಯಿಯೊಬ್ಬಳು ತನ್ನಿಬ್ಬರು ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.

ಗೋವಿಂದಮ್ಮ(48) ಮಕ್ಕಳನ್ನು ರಾಧಿಕಾ(30) ಹಾಗೂ ರಮ್ಯ(28) ಆತ್ಮಹತ್ಯೆ ಮಾಡಿಕೊಂಡ ತಾಯಿ- ಮಕ್ಕಳು. ತೆಲಂಗಾಣದ ಖಮ್ಮಂನಲ್ಲಿರು ರಾಘವ ಥಿಯೇಟರ್ ಬಳಿ ಕುಟುಂಬ ವಾಸವಾಗಿತ್ತು.

ಗೋವಿಂದಮ್ಮನ ಪತಿ ಚಿನ್ನದ ಕೆಲಸ ಮಾಡುತ್ತಿದ್ದು, ಈ ಮೂಲಕ ಬದುಕಿನ ಬಂಡಿ ಸಾಗುತ್ತಿತ್ತು.
ಒಟ್ಟಿನಲ್ಲಿ ಕಡುಬಡತನದಿಂದ ಬದುಕುತ್ತಿರುವ ಈ ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳು ಮದುವೆಯ ವಯಸ್ಸಿಗೆ ಬಂದಿದ್ದಾರೆ. ಅಂತೆಯೇ ಮಗಳು ರಾಧಿಕಾ ಮದುವೆ ನಿಶ್ಚಯವಾಗಿದ್ದು, ಜನವರಿಯಲ್ಲಿ ಮದುವೆ ನಡೆಯಬೇಕಿತ್ತು.

ರಾತ್ರಿ ಕೆಲಸ ಮುಗಿಸಿಕೊಂಡು ಪತಿ ಮನೆಗೆ ಹಿಂದುರುಗಿದಾಗ ಪತ್ನಿ ಹಾಗೂ ಮಕ್ಕಳ ಶವ ಕಂಡು ದಂಗಾಗಿದ್ದಾರೆ.

ಘಟನೆಯಿಂದ  ಆಘಾತಗೊಂಡ  ಪತಿ  ಕೂಡಲೇ  ಪೊಲೀಸರಿಗೆ  ಮಾಹಿತಿ  ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Related