ಸತೀಶ್ ರೆಡ್ಡಿ ಕಾರಿಗೆ ಬೆಂಕಿ: ಚುರುಕುಗೊಂಡ ತನಿಖೆ

ಸತೀಶ್ ರೆಡ್ಡಿ ಕಾರಿಗೆ ಬೆಂಕಿ: ಚುರುಕುಗೊಂಡ ತನಿಖೆ

ಬೆಂಗಳೂರು: ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಗುರುವಾರ ಮಧ್ಯರಾತ್ರಿ 1.30 ರ ಸುಮಾರಿಗೆ ಘಟನೆ ನಡೆದಿದೆ.

ಬೊಮ್ಮನಹಳ್ಳಿಯಲ್ಲಿರುವ ಶಾಸಕರ ಮನೆಮುಂದೆ ನಿಂತಿದ್ದ ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಪೆಟ್ರೋಲ್ ಸುರಿದು ದುಷ್ಕರ್ಮಿಗಳು ಕಾರಿಗೆ ಬೆಂಕಿ ಹಚ್ಚಿದ್ದಾರೆ.

ಶಾಸಕರ ಮನೆಯ ಹಿಂಬದಿಯ ಗೇಟ್‍ನಿಂದ ದುಷ್ಕರ್ಮಿಗಳು ಒಳಗೆ ಬಂದಿದ್ದಾರೆಂದು ಆಗ್ನೇಯ ವಿಭಾಗದ ಡಿಸಿಪಿ ಜೋಶಿ ಶ್ರೀನಾಥ್ ಮಹದೇವ್ ಸ್ಪಷ್ಟನೆ ಕೊಟ್ಟಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಗುರುವಾರ ಮಧ್ಯರಾತ್ರಿ 1:23ರ ಸುಮಾರಿಗೆ ನಾಲ್ವರು ದುಷ್ಕರ್ಮಿಗಳು ಬಾಟಲ್ನಲ್ಲಿ ಪೆಟ್ರೋಲ್ ತಂದು ಕಾರಿಗೆ ಬೆಂಕಿ ಹಚ್ಚಿ 1:26ರಷ್ಟರೊಳಗೆ ಕೆಲಸ ಮುಗಿಸಿ ಎಸ್ಕೆಪ್ ಆಗಿದ್ದಾರೆ. ಬೆಂಕಿಗೆ ಆಹುತಿಯಾದ ಎರಡು ಕಾರುಗಳು ದುಬಾರಿ ಬೆಲೆಯದ್ದಾಗಿದ್ದು ಸುಟ್ಟು ಕರಕಲಾಗಿವೆ.

ಬೊಮ್ಮನಹಳ್ಳಿ, ಸುದ್ದಗುಂಟೆಪಾಳ್ಯ, ತಿಲಕ್ನಗರ ಠಾಣೆ ಸೇರಿ ಒಟ್ಟು ಮೂರು ಠಾಣೆಗಳ ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಘಟನೆಗೆ ಅಸಲಿ ಕಾರಣ ಏನು? ರಾಜಕೀಯ ಕಾರಣಕ್ಕಾ? ಅಥವಾ ವೈಯಕ್ತಿಕ ಕಾರಣಕ್ಕಾ? ಎಂದು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮಾಡಲು ಮುಂದಾಗಿದ್ದಾರೆ.

Related