ಮೈಸೂರು ನಗರಕ್ಕೆ ಮೆಟ್ರೋಭಾಗ್ಯ: ನರೇಂದ್ರ ಮೋದಿ

ಮೈಸೂರು ನಗರಕ್ಕೆ ಮೆಟ್ರೋಭಾಗ್ಯ: ನರೇಂದ್ರ ಮೋದಿ

ಬೆಂಗಳೂರು: ಸಂಸ್ಕೃತಿಕ ನಗರಿ ಮೈಸೂರುಗೆ ಮೆಟ್ರೋ ಭಾಗ್ಯ ಒದಗಿ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರು ಇಂದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ವಿಸ್ತರಣೆ ಮಾರ್ಗಕ್ಕೆ ಇಂದು ಚಾಲನೆ ನೀಡಿದ್ದ ಸಂದರ್ಭದಲ್ಲಿ ಮೈಸೂರು ನಗರವಾಸಿಗಳು ಸಹ ಮೆಟ್ರೋದಲ್ಲಿ ಓಡಾಡಬಹುದೆಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಿಂದ ಮೈಸೂರಿನಲ್ಲಿ ಭವಿಷ್ಯದಲ್ಲಿ ಮೆಟ್ರೋ ಮಾರ್ಗ ನಿರ್ಮಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

ಇತ್ತೀಚಿಗಷ್ಟೇ ಆರಂಭಗೊಂಡಿದ್ದ ವೈಟ್‌ಫೀಲ್ಡ್ (ಕಾಡುಗೋಡಿ) ನಿಂದ ಚಲ್ಲಘಟ್ಟದವರೆಗಿನ ನೇರಳೆ ಮಾರ್ಗವು ಒಟ್ಟು 43.49 ಕಿಮೀ ಉದ್ದ ಮತ್ತು 37 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ.

ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ಕೊನೆಯ ರೈಲು ರಾತ್ರಿ 10.45 ಕ್ಕೆ ಮತ್ತು ಉಳಿದ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11.05 ಕ್ಕೆ ಹೊರಡಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

 

Related