ವ್ಯಾಕ್ಸಿನೇಷನ್ ಡ್ರೈವ್‌ಗೆ ಎಂ. ಸತೀಶ್‌ರೆಡ್ಡಿ ಚಾಲನೆ

ವ್ಯಾಕ್ಸಿನೇಷನ್ ಡ್ರೈವ್‌ಗೆ ಎಂ. ಸತೀಶ್‌ರೆಡ್ಡಿ ಚಾಲನೆ

ಬೊಮ್ಮನಹಳ್ಳಿ: ಹೊಂಗಸAದ್ರದಲ್ಲಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಸಾಯಿ ಗಾರ್ಮೆಂಟ್ಸ್ನಲ್ಲಿ ಶುಕ್ರವಾರ ವಿಧಾನ ಸಭೆಯ ಮುಖ್ಯ ಸಚೇತಕ ಎಂ. ಸತೀಶ್‌ರೆಡ್ಡಿ ಅವರು ವ್ಯಾಕ್ಸಿನೇಷನ್ ಡ್ರೈವ್‌ಗೆ ಚಾಲನೆ ನೀಡಿದರು. ಎಲ್ಲೆಡೆ ನಡೆಯುತ್ತಿರುವ ವ್ಯಾಕ್ಸಿನೇಷನ್ ಡ್ರೈವ್ ಹೆಚ್ಚು, ಗಾರ್ಮೆಂಟ್ಸ್ ಕಾರ್ಖಾನೆಗಳು ಇರುವ ಬೊಮ್ಮನಹಳ್ಳಿಯಲ್ಲಿ ವಲಸಿಗ ಕಾರ್ಮಿಕರನ್ನು ಪತ್ತೆ ಮಾಡಿ ವ್ಯಾಕ್ಸಿನ್ ನೀಡಲು ಕ್ಷೇತ್ರದಲ್ಲಿ ಈಗಾಗಲೇ ಶೇ.80ರಷ್ಟು ಮೊದಲನೇ ಡೋಸ್ ನೀಡಲಾಗಿದೆ. ಎರಡನೇ ಡೋಸ್ ಶೇ.60ರಷ್ಟು ಮುಗಿದಿದೆ. ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು 50 ಲಸಿಕೆ ನೀಡಲಾಗುತ್ತಿದೆ. ಬೊಮ್ಮನಹಳ್ಳಿ ವಲಯ ಕರೊನಾ ಮುಕ್ತ ಮಾಡಬೇಕು ಎನ್ನುವುದೇ ನಮ್ಮ ಗುರಿ ಎಂದು ಬೊಮ್ಮನಹಳ್ಳಿಯಲ್ಲಿ ಎಂ. ಸತೀಶರೆಡ್ಡಿ ಅವರು ಹೇಳಿದರು.

Related