ಪಲ್ಸ್ ಪೋಲಿಯೋಗೆ ಶಾಸಕ ಚಾಲನೆ

ಪಲ್ಸ್ ಪೋಲಿಯೋಗೆ ಶಾಸಕ ಚಾಲನೆ

ಗಂಗಾವತಿ : ನಗರದ ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಭಾನುವಾರ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರಾದ ಪರಣ್ಣ ಮುನವಳ್ಳಿ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ರಾಷ್ಟ್ರೀಯ ಆರೋಗ್ಯ ಇಲಾಖೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಲಹೆ ಸೂಚನೆಯಂತೆ ಜೀರೋದಿಂದ 5 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಕಡ್ಡಾಯವಾಗಿ ಹಾಕಿಸಬೇಕು, ಲಸಿಕೆ ಹಾಕಿಸುವುದರಿಂದ ದೈಹಿಕ ಹಾಗೂ ಅಂಗವಿಕಲತೆ ವೈಫಲ್ಯದ ತೊಂದರೆಯಿಂದ ಮಕ್ಕಳು ದೂರವಾಗಬಹುದು ಎಂದು ಹೇಳಿದರು.

ಮುಖ್ಯ ವೈದ್ಯಾಧಿಕಾರಿ ಈಶ್ವರ ಸವಡಿ ಮಾತನಾಡಿ, ಗಂಗಾವತಿ ತಾಲೂಕಿನ ಎರಡು 283 ಲಸಿಕೆ ಕೇಂದ್ರಗಳನ್ನು ತೆರೆಯಲಾಗಿದ್ದು 56844 ಮಕ್ಕಳು ಪಲ್ಸ್ ಪೋಲಿಯೋ ಲಸಿಕೆ ಪಡೆಯಲಿದ್ದು ಇದು ನಾಲ್ಕು ದಿನಗಳ ಕಾಲ ನಿರಂತರವಾಗಿ ಕಾರ್ಯಕ್ರಮ ಇರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರ ನಿಗಮ (ಕಾಡಾ) ಅಧ್ಯಕ್ಷ ತಿಪ್ಪೆ ರುದ್ರಸ್ವಾಮಿ, ತಹಶೀಲ್ದಾರ್ ವರ್ಣಿತ್, ನೇಗಿ ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಮ್ಮದ್ ರಫಿ, ಜಿಲ್ಲಾ ಪಂಚಾಯತ್ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಭಾಗ್ಯವತಿ ಬೋಲಾ, ಆರೋಗ್ಯ ವೈದ್ಯಾಧಿಕಾರಿ ಡಾ. ಶರಣಪ್ಪ, ಬಿಜೆಪಿ ಮುಖಂಡರು ಟಿ.ಆರ್. ರಾಯಬಾಗಿ, ಶಿವು ಅರಿಕೇರಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related