ಇಂದು ಸಾರ್ವಜನಿಕರಿಗೆ ಲಾಲ್‌ಬಾಗ್‌ ಪ್ರವೇಶವಿಲ್ಲ

ಇಂದು ಸಾರ್ವಜನಿಕರಿಗೆ ಲಾಲ್‌ಬಾಗ್‌ ಪ್ರವೇಶವಿಲ್ಲ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರುನಲ್ಲಿರುವಂತಹ ಲಾಲ್‌ಬಾಗ್‌ ಗೆ ಇಂದು ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿದೆ

ಹೌದು, ಇಂದು ಮಧ್ಯಾಹ್ನ 2ಗಂಟೆಯಿಂದ ಸಂಜೆ 5ಗಂಟೆವರೆಗೆ ಲಾಲ್ ಬಾಗ್ ಪ್ರವೇಶ ನಿಷೇಧ ಏರಲಾಗಿದೆ.

ಜಿ-20 ಶೃಂಗಸಭೆಯ ಗಣ್ಯರು ಭೇಟಿ‌ ನೀಡುವ ಹಿನ್ನೆಲೆಯಲ್ಲಿ ಪ್ರವೇಶ ನಿಷೇಧಿಸಲಾಗಿದೆ. ವಿದೇಶಿ ಗಣ್ಯರು ಉದ್ಯಾನವನಕ್ಕೆ ಆಗಮಿಸುವುದರಿಂದ ಭದ್ರತಾ ದೃಷ್ಟಿಯಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಕೋರಿದ್ದಾರೆ.

ಜಿ-20 ಶೃಂಗಸಭೆಯ ಗಣ್ಯರು ಭೇಟಿ‌ ನೀಡುವ ಹಿನ್ನೆಲೆಯಲ್ಲಿ ಲಾಲ್‌ಬಾಗ್‌ನಲ್ಲಿ ಆಗಸ್ಟ್‌ 30ರಂದು ಮಧ್ಯಾಹ್ನ 2ಗಂಟೆಯಿಂದ ಸಂಜೆ 5ಗಂಟೆವರೆಗೆ ಸಾರ್ವಜನಿಕರು, ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಎಂದು ಲಾಲ್‌ಬಾಗ್ ತೋಟಗಾರಿಕಾ ಉಪ ನಿರ್ದೆಶಕರು ತಿಳಿಸಿದ್ದಾರೆ.

 

Related