ಲಾಲ್‌ಬಾಗ್ ಪ್ರವೇಶ, ಪಾರ್ಕಿಂಗ್ ಶುಲ್ಕ ಏರಿಕೆ

ಲಾಲ್‌ಬಾಗ್ ಪ್ರವೇಶ, ಪಾರ್ಕಿಂಗ್ ಶುಲ್ಕ ಏರಿಕೆ

ಬೆಂಗಳೂರು: ಬೆಂಗಳೂರಿನ ಲಾಲ್‌ಬಾಗ್ ಪ್ರವೇಶ, ವಾಹನ ನಿಲುಗಡೆ ಶುಲ್ಕ ಏರಿಕೆ ಮಾಡಿ ಎಂದು ತೋಟಗಾರಿಕಾ ಇಲಾಖೆ ಆದೇಶ ಹೊರಡಿಸಿದೆ.

ಇಂದಿನಿಂದಲೇ ಹೊಸ ಆದೇಶ ಜಾರಿಗೆ ಬರಲಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಜಿ. ಕುಸುಮಾ ತಿಳಿಸಿದ್ದಾರೆ. ಇತರೆ ಉದ್ಯಾನಗಳಲ್ಲಿ ಪ್ರವೇಶ ಶುಲ್ಕ 50 ರೂ. ಇದ್ದು, ಸಾರ್ವಜನಿಕರಿಗೆ ಹೊರೆಯಾಗದಂತೆ ಕೇವಲ 5 ರೂ. ಹೆಚ್ಚಿಸಲಾಗಿದೆ.

Related