ಕುಲ್ಫಿ ತಿನ್ನುವ ಮುಂಚೆ ಹುಷಾರ್..!

  • In State
  • February 15, 2020
  • 308 Views
ಕುಲ್ಫಿ ತಿನ್ನುವ ಮುಂಚೆ ಹುಷಾರ್..!

ಮಡಿಕೇರಿ, ಫೆ. 15 : ಕೆಲ ದಿನಗಳಲ್ಲೇ ಬೇಸಿಗೆ ಶುರುವಾಗಲಿದ್ದು, ತಂಪು ಪಾನೀಯ, ಐಸ್ಕ್ರೀಮ್ ಜ್ಯೂಸ್ ಕುಡಿಯೋದು ಸಾಮಾನ್ಯ. ಬೇಸಿಗೆ ಅಂತಾ ಐಸ್ಕ್ರೀಮ್, ಕುಲ್ಫಿ ತಿನ್ನೋಕ್ಕೂ ಮುಂಚೆ ಸ್ವಲ್ಪ ಹುಷಾರಾಗಿರಿ.
ಮಡಿಕೇರಿ ತಾಲೂಕಿನ ಆವಂದೂರಿನಲ್ಲಿ ಹೀಗೊಂದು ಘಟನೆ ನಡೆದಿದ್ದು, ರಮ್ಯ ಎಂಬುವವರು ಅಶ್ರಫ್ ತಿಂಡಿ ತಯಾರಿಕೆ ಘಟಕದಲ್ಲಿ ಕುಲ್ಫಿ ಖರೀದಿಸಿದ್ದಾರೆ. ಕುಲ್ಫಿ ತಿನ್ನುವಾಗ ಬ್ಲೇಡ್ ಪತ್ತೆಯಾಗಿದ್ದು, ಬ್ಲೇಡ್ ನಾಲಿಗೆಗೆ ತಾಗಿದೆ. ಈ ವೇಳೆ ರಮ್ಯ ಎಚ್ಚೆತ್ತುಕೊಂಡಿದ್ದು, ದುರಂತ ತಪ್ಪಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ.

Related