ಕೆಜಿಎಫ್, ಪುಪ್ಪ ಚಿತ್ರದ ನಿರ್ದೇಶಕರುಗಳ ನಡುವೆ ಪೈಪೋಟಿ..!

ಕೆಜಿಎಫ್, ಪುಪ್ಪ ಚಿತ್ರದ ನಿರ್ದೇಶಕರುಗಳ ನಡುವೆ ಪೈಪೋಟಿ..!

`ಕೆಜಿಎಫ್’ ಸಿನಿಮಾ ಮತ್ತು ಪುಷ್ಪ ಚಿತ್ರ ಶುರುವಾದಗಿನಿಂದಲೂ ಈ ಎರಡು ಚಿತ್ರದ ನಿರ್ದೇಶಕರ ಮಧ್ಯೆ ಪೈಪೋಟಿ ನಡೆಯುತ್ತಲೇ ಇದೆ. ಇದೀಗ ʻಪುಷ್ಪ 2ʼ ಮತ್ತು ಸಲಾರ್ ಚಿತ್ರದಲ್ಲೂ ಈ ಪೈಪೋಟಿ ಪ್ರಶಾಂತ್ ನೀಲ್ ಮತ್ತು ಸುಕುಮಾರ್ ನಡುವೆ ಮುಂದುವರೆದಿದೆ.

ಪ್ರಶಾಂತ್ನೀಲ್ಗೂ ಮತ್ತು ಪುಷ್ಪ ನಿರ್ದೇಶಕ ಸುಕುಮಾರ್ಗೂ ಸಿನಿಮಾಗಳ ವಿಚಾರವಾಗಿ ಖಡಕ್ ಪೈಪೋಟಿ ನಡೆಯುತ್ತಲೇ ಇದೆ. ಕೆಜಿಎಫ್ಗಿಂತ 10 ಪಟ್ಟು ಪುಷ್ಪ ಚಿತ್ರ ಉತ್ತಮವಾಗಿದೆ ಅಂತಾ ಹೇಳಿ ಕನ್ನಡಿಗರ ಕೆಂಗಣ್ಣಿಗೂ ಈ ಚಿತ್ರತಂಡ ಗುರಿಯಾಗಿತ್ತು. ಆದರೆ ಕೆಜಿಎಫ್ 2 ಚಿತ್ರದ ಸಕ್ಸಸ್ ಈ ಎಲ್ಲಾ ಕೊಂಕು ಮಾತಿಗೂ ಉತ್ತರ ಕೊಟ್ಟಿತ್ತು. ಅಂದಿನಿಂದ ಇವರೆಗೂ ನಮ್ಮ ಸಿನಿಮಾನೇ ಬೆಸ್ಟ್ ಅಂತಾ ಈ ಇಬ್ಬರ ನಿರ್ದೇಶಕರ ನಡುವೆ ಕಾದಾಟ ನಡೆಯುತ್ತಲೇ ಇದೆ. ಇದೀಗ ಸಲಾರ್ ಮತ್ತು `ಪುಷ್ಪ 2′ ಚಿತ್ರದವೆಗೂ ಮುಂದುವರೆದಿದೆ.

`ಪುಷ್ಪ 2′ ಮತ್ತು ಸಲಾರ್ 2023ಕ್ಕೆ ತೆರೆಗೆ ಅಬ್ಬರಿಸಲು ಸಜ್ಜಾಗಿದೆ. ಪ್ರಶಾಂತ್ ನೀಲ್ಗೆ ಪೈಪೋಟಿ ನೀಡೋಕೆ ಅಂತಲೇ ಸುಕುಮಾರ್ ಕೂಡ ಚಿತ್ರ ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಹಾಗಾಗಿಯೇ ಮುಂದಿನ ವರ್ಷ ಈ ಎರಡು ಚಿತ್ರಗಳ ಮಧ್ಯೆ ಬಿಗ್ ಕ್ಲ್ಯಾಶ್ ಆಗುವ ಸಾಧ್ಯತೆಯಿದೆ.
ದಾಖಲೆಗಳ ಮೇಲೆ ದಾಖಲೆ ಮಾಡಿರುವ ಯಶ್ ಮತ್ತು ಪ್ರಶಾಂತ್ ನೀಲ್ ಚಿತ್ರಕ್ಕೆ ಸುಕುಮಾರ್ ಸೆಡ್ಡು ಹೊಡೆಯುತ್ತಾರಾ. ಈ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದು ಅಭಿಮಾನಿಗಳ ಕುತೂಹಲ. ಇದಕ್ಕೆಲ್ಲ ಉತ್ತರ ಸಿಗಬೇಕು ಅಂದ್ರೆ ರಿಲೀಸ್ ಆಗುವವರೆಗೂ ಕಾಯಲೇಬೇಕು.

Related