ಇಷ್ಟಾರ್ಥಗಳ ಈಡೇರಿಸುವ ಕಂಬಳಿಪುರದ ಕಾಟೇರಮ್ಮ..!

ಇಷ್ಟಾರ್ಥಗಳ ಈಡೇರಿಸುವ ಕಂಬಳಿಪುರದ ಕಾಟೇರಮ್ಮ..!

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಲ್ಲಿರುವ ಕಂಬಳಿಪುರ ಗ್ರಾಮದಲ್ಲಿರುವ ಕಾಟೇರಮ್ಮ ದೇವಸ್ಥಾನಕ್ಕೆ ರಾಜ್ಯ ಮಾತ್ರವಲ್ಲದೆ ವಿವಿಧ ರಾಜ್ಯಗಳಿಂದ ಭೇಟಿ ಮಾಡಿ ದೇವಿ ಆಶೀರ್ವಾದ ಪಡೆದು ತಮಗೆ ಬಂದಿರುವ ಕಷ್ಟಗಳನ್ನು ದೇವಿ ಹತ್ತಿರ ಹೇಳಿಕೊಂಡು ಎಲ್ಲಾ ಕಷ್ಟಗಳಿಗೂ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.

ಸುಮಾರು 350 ವರ್ಷಗಳ ಇತಿಹಾಸವಿರುವ ಜೋಡಿ ಆಲದ ಮರವಿದ್ದು ಈ ಜೋಡಿ ಆಲದ ಮರದ ಕೆಳಗಡೆ ನವ ದೇವತೆಗಳ ಸ್ಥಾಪನೆಯಾಗಿದ್ದು ಈ ಆಲದ ಮರದ ಸುತ್ತ 48 ಅಥವಾ 108 ಸುತ್ತು ಸುತ್ತುವುದರಿಂದ ನಮಗೆ ಬಂದಿರುವಂತಹ ಕಷ್ಟ, ವಿಘ್ನ ಮಾಟ, ಮಂತ್ರ ಇನ್ನಿತರ ಸಮಸ್ಯೆಗಳೆಲ್ಲ ಪರಿಹಾರವಾಗುತ್ತದೆ ಎಂದು ಕಂಬಳಿಪುರ ಕಾಟೇರಮ್ಮ ದೇವಸ್ಥಾನಭೇಟಿ ನೀಡುವ ಭಕ್ತಾದಿಗಳು ಹೇಳುತ್ತಾರೆ. 

ಹೌದು, ಕಾಟೇರಮ್ಮ ತಾಯಿ ದೇವಸ್ಥಾನಕ್ಕೆ ಒಂದು ಸಾರಿ ಭೇಟಿ ನೀಡಿದರೆ ನಿಮ್ಮ ಕಷ್ಟವೆಲ್ಲ ಪರಿಹಾರವಾಗುತ್ತದೆ ಎಂದು ಇಲ್ಲಿ ಭೇಟಿ ಮಾಡುವ ಭಕ್ತಾದಿಗರು ಹೇಳುತ್ತಾರೆ. 9 ಶುಕ್ರವಾರ ಕಾಟೇರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ 9 ವಾರ ಕೂಡ ಆಲದ ಮರಕ್ಕೆ ತೆಂಗಿನಕಾಯಿ ಕಟ್ಟುವುದರಿಂದ ನಾವು ಬೇಡಿಕೊಂಡ ಬೇಡಿಕೆಯಲ್ಲ ಈಡೇರುತ್ತದೆ. ಇದನ್ನೂ ಓದಿ: ವಸತಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಸಿಎಂ

ನಿಮಗೆ ಏನೇ ಕಷ್ಟ ಬಂದರೂ ಪರಿಹಾರ ಆಗುತ್ತೆ. ನಿಮ್ಮ ಇಷ್ಟಾರ್ಥಗಳು ಏನೇ ಇದ್ದರೂ ಕೂಡ ಪೂರೈಸುತ್ತಾಳೆ ಈ ಕಾಟೇರಮ್ಮ ದೇವಿ. ಮಾನವನಿಗೆ ಕಾಡುವಂತಹ ಎಲ್ಲಾ ಕಷ್ಟಗಳಿಗೆ ಕಾಟೇರಮ್ಮ ತಾಯಿ ಪರಿಹಾರ ನೀಡುತ್ತಾಳಂತೆ.

ಇನ್ನು ಶಕ್ತಿ ದೇವತೆ ಕಾಟೇರಮ್ಮ ದೇವಾಲಯದ ಬಳಿ ಇಂದು (ಶುಕ್ರವಾರ ಜುಲೈ 05) ಆಷಾಢ ಅಮಾವಾಸ್ಯೆ ಪ್ರಯುಕ್ತ ಇಂದು ಭಕ್ತ ಸಾಗರ ನೆರೆದಿತ್ತು. ಹೊಸಕೋಟೆಯಿಂದ ದೇವನಹಳ್ಳಿಗೆ ಸಂಪರ್ಕಿಸುವ ರಸ್ತೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಇಲ್ಲಿ ದೇವಿಯ ದರ್ಶನಕ್ಕೆ ಮತ್ತು ಪೂಜೆಗೆ ನೆರೆದಿದ್ದರಿಂದ ಸಂಚಾರದಟ್ಟಣೆ ಉಂಟಾಗಿತ್ತು.

ಆಶಾಡ ಅಮಾವಾಸ್ಯೆ ವರ್ಷದ ಪ್ರಥಮ ಆಷಾಢ ಶುಕ್ರವಾರವಾಗಿದ್ದು ಇಂದು ದೇವಿಯ ಪೂಜೆಗೆ ಮತ್ತು ಆರಾಧನೆಗೆ ಬಹು ಶ್ರೇಷ್ಠ ಎಂಬ ನಂಬಿಕೆ ಇದೆ. ಸಂಕಷ್ಟ ಪರಿಹಾರಕ್ಕೆ ಮತ್ತು ತಮ್ಮ ಇಚ್ಛೆಗಳನ್ನು ಶೀಘ್ರವಾಗಿ ಫಲಿಸಲು ಮತ್ತು ಪೂರೈಸಲು ದೇವಿಯನ್ನು ಆರಾಧಿಸಲು ಭಕ್ತರು ತಂಡೋಪ ತಂಡವಾಗಿ ದೇವಾಲಯದ ಬಳಿ ನೆರೆದಿದ್ದರು.

ದೇವಾಲಯದ ಆವರಣದಲ್ಲಿರುವ ಬೃಹತ್ ಆಲದ ಮರಕ್ಕೆ ಕೆಂಪು ಬಣ್ಣದ ವಸ್ತ್ರದಲ್ಲಿ ತೆಂಗಿನಕಾಯಿ ಹರಿಶಿನ ಕುಂಕುಮ ಹರಕೆಯನ್ನು ಮರಕೆ ಕಟ್ಟಿ ತಮ್ಮ ಇಷ್ಟಾರ್ಥಗಳನ್ನು ದೇವಿಯ ಮುಖಾಂತರ ಪೂರೈಸಲು ಬೇಡಿಕೆಯನ್ನು ಸಲ್ಲಿಸುತ್ತಾರೆ. ಸಾವಿರಾರು ಮಹಿಳೆಯರು ಪವಿತ್ರ ಆಶಾಡ ಅಮಾವಾಸ್ಯೆ ಶುಕ್ರವಾರದಂದು ತಮ್ಮ ಇಷ್ಟ ಕಾಮನೆಗಳನ್ನು ಪೂರೈಸಿಕೊಳ್ಳಲು ದೇವಿಯ ಮೊರೆ ಹೋದರು.

ದೇವಾಲಯದ ಟ್ರಸ್ಟಿಗಳಾದ ಅಂಬರೀಶ್ ಅವರು ಈ ಸಂದರ್ಭದಲ್ಲಿ ಪ್ರಜಾ ವಾಹಿನಿಯೊಂದಿಗೆ ಮಾತನಾಡುತ್ತಾ ರಾಜ್ಯದ ವಿವಿಧ ಪ್ರದೇಶಗಳಿಂದ ಇಲ್ಲಿಗೆ ಬರುವ ಸಾವಿರಾರು ಭಕ್ತರ ಅನುಕೂಲಕ್ಕಾಗಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗಲು ಭಕ್ತ ಪರಕಾಷ್ಟೆಯನ್ನು ಮೆರೆದರು.

Related