ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಸಲು ಒತ್ತಾಯ

ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಸಲು ಒತ್ತಾಯ

ಶಹಾಪುರ : ತಾಲ್ಲೂಕಿನ ಹೋತಪೇಠ ಗ್ರಾಮಕ್ಕೆ ಸೂಕ್ತ ಸಮಯಕ್ಕೆ ಬಸ್‌ನ ವ್ಯವಸ್ಥೆ ಇಲ್ಲದ ಕಾರಣ ಗ್ರಾಮದ ವಿದ್ಯಾರ್ಥಿಗಳ ಪರದಾಟ ಹೇಳ ತೀರದ್ದಾಗಿತ್ತು. ಪ್ರತಿ ನಿತ್ಯ ಗ್ರಾಮಸ್ಥರು, ವಿದ್ಯಾರ್ಥಿಗಳು ಬಸ್‌ಗಳಿಗಾಗಿ ಗಂಟೆ ಗಟ್ಟಲೇ ಕಾಯುವುದೇ ನಿತ್ಯ ಕಾಯಕವಾಗಿದ್ದು ಯಾರೊಬ್ಬ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಕರವೇ ತಾಲ್ಲೂಕು ಅಧ್ಯಕ್ಷ ಭೀಮಣ್ಣ ಶಖಾಪುರ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಬಾರದ ಹಿನ್ನಲೇ ವಿದ್ಯಾರ್ಥಿಗಳೊಂದಿಗೆ ಡಿಪೋ ಮ್ಯಾನೇಜರ್‌ಗೆ ಭೇಟಿಯಾಗಿ ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ಮನವಿ ಮಾಡಿದರೂ ಒಂದು ವೇಳೆ ವಿಳಂಭವಾದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಿದ್ದು ಪಟ್ಟೇದಾರ, ರಾಯಣ್ಣ, ರವಿ ಯಾದವ್, ಬಾಬು ಗವ್ಹರ್, ಮನ್ಸೂರ್ ಮುಕ್ತಾಪೂರ ಸೇರಿದಂತೆ ಕಾರ್ಯಕರ್ತರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇನ್ನಿತರರಿದ್ದರು.

Related