ಬೆಳೆ ಪರಿಹಾರಕ್ಕೆ ರೈತರ ಮನವಿ

ಬೆಳೆ ಪರಿಹಾರಕ್ಕೆ ರೈತರ ಮನವಿ

ಇಂಡಿ: ಕೊರೋನಾ ಮಹಾಮಾರಿಯಿಂದಾಗಿ ಸೂಕ್ತ ಮಾರುಕಟ್ಟೆಯಿಲ್ಲದೆ ರೈತರು ಬೆಳೆದ ಬೆಳೆ ಸಂಪೂರ್ಣ ನಾಶಹೊಂದಿವೆ. ಸರಕಾರ ಕೂಡಲೇ ರೈತರಿಗೆ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ. ಡಿ. ಪಾಟೀಲ ಮಾತನಾಡಿ, ವಿಜಯಪೂರ ಜಿಲ್ಲೆಯ ತಾಲೂಕುಗಳಾದ ಇಂಡಿ-ಸಿಂದಗಿ ಶಾಶ್ವತ ಬರಗಾಲಕ್ಕೆ ತುತ್ತಾಗಿರುವ ಭಾಗ ಕೋವಿಡ-19 ಮಹಾಮಾರಿಯಿಂದಾಗಿ ಸಾರಿಗೆ ಸಂಪರ್ಕ, ಸೂಕ್ತ ಮಾರುಕಟ್ಟೆ ಇಲ್ಲದೆ ರೈತರು ಬೆಳೆದ ದವಸ ಧಾನ್ಯ ಸಂಪೂರ್ಣ ಹಾಳಾಗಿವೆ.

ಭಾರಿ ಬಿರುಗಾಳಿ ಸಹಿತ ಆಲಿಕಲ್ಲಿನ ಮಳೆಯಿಂದ ತಾಲೂಕಿನಲ್ಲಿರುವ ಲಿಂಬೆ, ದ್ರಾಕ್ಷೀ, ದಾಳಿಂಬೆ, ನುಗ್ಗೆ, ಪಪ್ಪಾಯಿ ತೋಟಗಾರಿಕೆ ಬೆಳೆಗಳು ನೆಲಕ್ಕೆ ಉರಳಿರುವದರಿಂದ ಮತ್ತಷ್ಟು ರೈತರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ. ಆದ್ದರಿಂದ ಸರಕಾರ ಕೂಡಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ರೈತರಿಗಾದ ಹಾನಿಯನ್ನು ಸರಕಾರ ಪರಿಹಾರ ರೂಪದಲ್ಲಿ ಕೊಡಬೇಕು ಎಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಸಿದ್ದು ಡಂಗಾ, ಶ್ರೀಶೈಲಗೌಡ ಪಾಟೀಲ, ಮಹಿಬೂಬ ಬೇನೂರ, ಮಂಜುನಾಥ ಕಾಮಗೊಂಡ, ಸುಧೀರ ಕರಕಟ್ಟಿ, ಬಿ.ಎಲ್.ರಾಠೋಡ ಉಪಸ್ಥಿತರಿದ್ದರು.

Related