ಹೊಂಗಸಂದ್ರ ಬಿಜೆಪಿ ಮಹಿಳಾ ಕಾರ್ಯಕರ್ತರ ಮೇಲೆ ಕಾಂಗ್ರೆಸ್ಸಿಗರಿಂದ ಹಲ್ಲೆ

ಹೊಂಗಸಂದ್ರ ಬಿಜೆಪಿ ಮಹಿಳಾ ಕಾರ್ಯಕರ್ತರ ಮೇಲೆ ಕಾಂಗ್ರೆಸ್ಸಿಗರಿಂದ ಹಲ್ಲೆ

ಬೆಂಗಳೂರು: ಮತದಾನದ ದಿನಾಂಕ ಹತ್ತಿರ ಬರುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಜಿದ್ದಾಜಿದ್ದಿ ಪ್ರಚಾರದಲ್ಲಿ ತೊಡಗಿದ್ದು, ಶುಕ್ರವಾರ ಬೆಳಗ್ಗೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೊಂಗಸಂದ್ರ ಗ್ರಾಮದಲ್ಲಿ ದಲಿತ ಕಾಲೋನಿಯಲ್ಲಿ ಬಿಜೆಪಿ ಕಾರ್ಯಕರ್ತರು ಸತೀಶ್ ರೆಡ್ಡಿ ಪರವಾಗಿ ಮತಯಾಚನೆ ಮಾಡುತ್ತಿರುವ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಉಮಾಪತಿ ಶ್ರೀನಿವಾಸ ಗೌಡ ಅವರ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಅದೇ ಸಮಯಕ್ಕೆ ಅದೇ ಜಾಗಕ್ಕೆ ಬಂದು ಬಿಜೆಪಿಯ ಅಭ್ಯರ್ಥಿಯ ಪ್ರಚಾರದ ಸಂದರ್ಭದಲ್ಲಿ ಎದುರುಬದುರಾಗಿದ್ದಾರೆ.

ಇನ್ನು ಎರಡು ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಜಯ ಘೋಷಣೆ ಮಾಡಿದರು.

ಇದರಿಂದ ಎರಡು ಪಕ್ಷಗಳ ನಡುವೆ ಸಂಘರ್ಷ ಉಂಟಾಗಿದ್ದು, ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರವೋಕ್ ಮಾಡಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಉಮಾಪತಿ ಶ್ರೀನಿವಾಸ ಗೌಡ ಅವರು ಮೀಸೆ ತಿರುವಿಸಿ ತೊಡೆ ತಟ್ಟಿರುವ ಘಟನೆ ನಡೆದಿದೆ. ಇದರಿಂದ ಬಿಜೆಪಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೆದ್ದು ಎರಡು ಗುಂಪುಗಳ ನಡುವೆ ನೂಕು ನುಗ್ಗಲು ನಡೆದಿದೆ.

ನೂಕು ನುಗ್ಗಲು ನಡೆದ ಸಂದರ್ಭದಲ್ಲಿ ಸಾಕಮ್ಮ ಎಂಬ  ಬಿಜೆಪಿ ಮಹಿಳಾ ಕಾರ್ಯಕರ್ತೆಯ ಮೇಲೆ ಕಾಂಗ್ರೆಸಿಗರು ಹಲ್ಲೆ ಮಾಡಿದ್ದು ಅವರಿಗೆ ಗಾಯವಾಗಿದ್ದರಿಂದ ಸಾಕಮ್ಮರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಸ್ಥಳದಲ್ಲಿ ಇರುವಂತಹ ಪ್ರಚಾರದ ಬಿಜೆಪಿ ಪಕ್ಷದ ಆಟೋರೀಕ್ಷವನ್ನು ಕಾಂಗ್ರೆಸ್ಸಿಗರು ಒಡೆದು ನುಚ್ಚುನೂರು ಮಾಡಿರುವ ಘಟನೆ ನಡೆದಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡು ಪಕ್ಷಗಳದ ಕಾರ್ಯಕರ್ತರನ್ನು ಸಮಾಧಾನಪಡಿಸಿ ಅಲ್ಲಿಂದ ಕಳಿಸಿರುತ್ತಾರೆ.

ಇನ್ನು ಈ ಸಂದರ್ಭದಲ್ಲಿ ಮಹಿಳೆಯರು ದಲಿತ ಸಂಘರ್ಷ ಸಮಿತಿಯ ಸದಸ್ಯರು ಮಾಧ್ಯಮದೊಂದಿಗೆ ಮಾತನಾಡಿ, ಉಮಾಪತಿ ಶ್ರೀನಿವಾಸ ಗೌಡರವರು ಉದ್ದೇಶಪೂರ್ವಕವಾಗಿ ಪ್ರವೋಕ್ ಮಾಡಿ ನಮ್ಮ ಕಾರ್ಯಕರ್ತರನ್ನು ಒಂದು ರೀತಿಯಾಗಿ ಅವಮಾನಿಸಿದದ್ದಾರೆ.

ದಲಿತರ ವಿರುದ್ಧ ಬೆರಳನ್ನು ತೋರಿಸಿ ಮೀಸೆಯನ್ನು ತಿರುಗಿಸಿ ತೊಡೆ ತಟ್ಟಿರುವ ಉಮಾಪತಿ ಶ್ರೀನಿವಾಸಗೌಡರನ್ನು ಈ ಕೂಡಲೇ ಚುನಾವಣೆಯಿಂದ ಮಜಗೊಳಿಸಬೇಕೆಂದು ಅವರ ವಿರುದ್ಧ ಎಸ್ ಸಿ ಎಸ್ ಟಿ ಕಾಯ್ದೆ ಅಡಿಯಲ್ಲಿ ಕೇಸನ್ನು ನಮೂದಿಸಬೇಕೆಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಯಾದ ಉಮಾಪತಿ ಶ್ರೀನಿವಾಸ್ ಗೌಡ ಅವರ ವಿರುದ್ಧ ಧಿಕ್ಕಾರ ಕೂಗಿದರು.

ಪ್ರಚಾರದ ವೇಳೆ ದಲಿತರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಉಮಾಪತಿಯ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

Related