ಈತ ಟ್ರಂಪ್ ನ ಅಪ್ಪಟ ಅಭಿಮಾನಿ

ಈತ  ಟ್ರಂಪ್ ನ  ಅಪ್ಪಟ ಅಭಿಮಾನಿ

ಹೈದರಾಬಾದ್, ಫೆ. 24 : ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಭಾರತದಲ್ಲೂ ಟ್ರಂಪ್ ತಮ್ಮ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ತೆಲಂಗಾಣದಲ್ಲಿ ಅಭಿಮಾನಿಯೊಬ್ಬರು ಟ್ರಂಪ್ಗಾಗಿಯೇ ದೇವಸ್ಥಾನವನ್ನೇ ನಿರ್ಮಿಸಿದ್ದಾರೆ.
ಇಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿದ್ದಾರೆ. ಟ್ರಂಪ್ ಸ್ವಾಗತಿಸಲು ಇಡೀ ದೇಶಕ್ಕೆ ದೇಶವೇ ಸಜ್ಜಾಗಿದೆ. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಟ್ರಂಪ್ಗೆ ಸ್ವಾಗತ ಕೋರುತ್ತಿದ್ದಾರೆ. ಆದರೆ ತೆಲಂಗಾಣ ರಾಜ್ಯದಲ್ಲಿ ಟ್ರಂಪ್ ಅಭಿಮಾನಿಯೊಬ್ಬರು ತನ್ನ ನೆಚ್ಚಿನ ನಾಯಕನಿಗಾಗಿ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ.

ತೆಲಂಗಾಣದ ಜನ್ಗಾನ್ ಜಿಲ್ಲೆಯ ಬುಸ್ಸಾ ಕೃಷ್ಣ ಎಂಬವರು ಟ್ರಂಪ್ನ ಅಪ್ಪಟ ಅಭಿಮಾನಿ. ಟ್ರಂಪ್ಗಾಗಿ ದೇಗುಲ ಕಟ್ಟಿಸಿರುವ ಕೃಷ್ಣ, 6 ಅಡಿ ಎತ್ತರದ ಟ್ರಂಪ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ನಿತ್ಯ ಪೂಜಿಸುತ್ತಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ನಿತ್ಯವೂ ಹಾಲಿನ ಅಭಿಷೇಕ ಸೇರಿ ವಿವಿಧ ಅಭಿಷೇಕಗಳನ್ನು ಮಾಡುತ್ತಿದ್ದಾರೆ.

Related