ನುಗ್ಗೆ ಕಾಯಿಯ ಆರೋಗ್ಯಕರ ಲಕ್ಷಣಗಳು

ನುಗ್ಗೆ ಕಾಯಿಯ ಆರೋಗ್ಯಕರ ಲಕ್ಷಣಗಳು

ನಮ್ಮ ಇತ್ತೀಚಿನ ಜೀವನದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟಕರವಾಗಿದೆ.  ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ನಮ್ಮ ಸುತ್ತಮುತ್ತಲಿನ ನೈಸರ್ಗಿಕ ಪದಾರ್ಥಗಳು ಹಾಗೂ ನಮ್ಮ ಮನೆಯಲ್ಲಿ ಸಿಗುವಂತಹ ಆರೋಗ್ಯ ಕಾರವಾದ ಪದಾರ್ಥಗಳನ್ನು ಸರಿಯಾದ ಕ್ರಮದಲ್ಲಿ ಬಳಸುವುದರಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ ಮತ್ತು ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು.

ನಮ್ಮ ಆರೋಗ್ಯವನ್ನು ಸುಧಾರಿಸಲು ನುಗ್ಗೆಕಾಯಿ ಮತ್ತು ನುಗ್ಗೆಕಾಯಿಯ ಸೊಪ್ಪನ್ನು ತಿನ್ನೋದರಿಂದ ಆರೋಗ್ಯದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ನಾವು ನಿವರಿಸಿಕೊಳ್ಳಬಹುದು.

ಹೌದು, ನುಗ್ಗೆಕಾಯಿಯಲಿ ಹಲವು ಆಯುರ್ವೇದ ಔಷಧಿಗಳಿವೆ. ನುಗ್ಗೆಕಾಯಿ ಮನುಷ್ಯನಿಗೆ ಬೇಕಾಗುವ ವಿಟಮಿನ್ ಅಂಶವನ್ನು ಒದಗಿಸಿಕೊಡುತ್ತದೆ, ಅಷ್ಟೇ ಅಲ್ಲದೆ ಇದರಲ್ಲಿ ಹಲವು ಔಷಧಿ ಗುಣಗಳು ಇವೆ. ಇದು ಸಾಮಾನ್ಯ ಜ್ವರ, ಗಂಟಲ ಬೇನೆ, ಕೆರೆತ, ಶೀತ ಮೊದಲಾದ ವೈರಸ್ ಆಧಾರಿತ ಕಾಯಿಲೆಗಳನ್ನು ಹತ್ತಿಕ್ಕಲು ನೆರವಾಗುತ್ತದೆ. ಇದಕ್ಕಾಗಿ ನುಗ್ಗೇಕಾಯಿಯ ಸೂಪ್ ಅಥವಾ ರಸಂ ಮಾಡಿ ಬಿಸಿಬಿಸಿಯಾಗಿ ಸೇವಿಸುವುದು ಒಳ್ಳೆಯದು.

ಆಯುರ್ವೇದದ ಔಷಧಿಯಾಗಿ ಬಳಕೆಯಾಗುವ ನುಗ್ಗೆ ಸೊಪ್ಪು, ನುಗ್ಗೆಯ ಎಲೆಗಳನ್ನು ಅರೆದು ಕೊಂಚ ಜೇನಿನಲ್ಲಿ ಮಿಶ್ರಣ ಮಾಡಿ ಇದನ್ನು ಎಳನೀರಿನೊಂದಿಗೆ ಸೇವಿಸುವ ಮೂಲಕ ಹೊಟ್ಟೆಯಲ್ಲಿ ಉರಿ ಕಡಿಮೆಯಾಗುತ್ತದೆ. ಅಲ್ಲದೇ ಅತಿಸಾರ, ಕಾಲರಾ, ಜಾಂಡೀಸ್ ಮೊದಲಾದ ಕಾಯಿಲೆಗಳೂ ಶೀಘ್ರವಾಗಿ ಗುಣವಾಗುತ್ತವೆ.

ಹೆಚ್ಚಿನ ಪ್ರಮಾಣದಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ನುಗಳ ಕಾರಣ ದೇಹದ ಮೂಳೆಗಳು ಇನ್ನೂ ಹೆಚ್ಚಾಗಿ ದೃಢಗೊಳ್ಳಲು ಸಾಧ್ಯವಾಗುತ್ತದೆ. ನಿಯಮಿತವಾಗಿ ಸೇವಿಸುತ್ತಾ ಬಂದರೆ ಕ್ರಮೇಣ ಮೂಳೆಗಳ ದೃಢತೆ ಹೆಚ್ಚುತ್ತಾ ಹೋಗುತ್ತದೆ.

Related