ಗಣೇಶ ಮೂರ್ತಿ ವಿತರಣೆ

ಗಣೇಶ ಮೂರ್ತಿ ವಿತರಣೆ

ದಾಸರಹಳ್ಳಿ : ಕೋವಿಡ್ 3ನೇ ಅಲೆ ಹಿನ್ನೆಲೆ ಗೌರಿ ಗಣೇಶ ಹಬ್ಬದ ಆಚರಣೆಗೆ ರಾಜ್ಯಸರ್ಕಾರ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ ಎಂದು ಬುಧವಾರ ಮಾಜಿ ಶಾಸಕ ಎಸ್ ಮುನಿರಾಜು ತಿಳಿಸಿದರು.
ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಾಗಲಗುಂಟೆ, ಮಂಜುನಾಥನಗರದಲ್ಲಿ ಒಂದು ಸಾವಿರಕ್ಕೂ ಅಧಿಕ ವಿಗ್ರಹಗಳನ್ನು ವಿತರಿಸಿದರು. ಗೌರಿ ಗಣೇಶ ಮೂರ್ತಿಗಳನ್ನು ಕೂರಿಸಿ ಹಬ್ಬದ ದಿನ ವಿಶೇಷವಾಗಿ ಅಲಂಕಾರ ಮಾಡಿರುವ ಭಕ್ತರಿಗೆ ಬಹುಮಾನವನ್ನು ನೀಡಲಾಗುವುದು. ಮೂರ್ತಿಗಳನ್ನು ಪಡೆಯಲು ಚಿಕ್ಕ ಮಕ್ಕಳು ಮಹಿಳೆಯರು ಉತ್ಸಾಹದಿಂದ ಮೂರ್ತಿಗಳನ್ನು ಪಡೆದರು. ಮಾಜಿ ಶಾಸಕ ಎಸ್.ಮುನಿರಾಜು ನಮ್ಮ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಗೌರಿ ಗಣೇಶ ಹಬ್ಬದ ಪ್ರಯುಕ್ತ ಇಲ್ಲಿನ ನಾಗರಿಕರಿಗೆ ನಮ್ಮ ನಾಯಕರ ಮುಂದಾಳತ್ವದಲ್ಲಿ ಮೂರ್ತಿಗಳನ್ನು ವಿತರಿಸುತ್ತೇವೆ. ಕೋವಿಡ್ ಹಿನ್ನೆಲೆ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಕೇವಲ ಮನೆಗಳಲ್ಲಿ ಗಣೇಶ ಮೂರ್ತಿಗಳನ್ನು ಕೂರಿಸಿ ಹಬ್ಬವನ್ನು ಆಚರಿಸಬೇಕು. ನಂತರ ರಾಸಾಯನಿಕ ಮುಕ್ತ ಒಂದು ಸಾವಿರಕ್ಕೂ ಹೆಚ್ಚಿನ ಚಿಕ್ಕ ಗಣಪತಿ ವಿಗ್ರಹಗಳನ್ನು ನೀಡಲಾಗುತ್ತದೆ. ಸುದಾ ಮಾತನಾಡಿ ಕೋವಿಡ್ ಹಿನ್ನೆಲೆ ಪರಿಸರಯುಕ್ತ ಗೌರಿ ಗಣೇಶ ಮೂರ್ತಿಗಳನ್ನು ನಮ್ಮ ಭಾಗದ ಮಾಜಿ ಶಾಸಕರು ವಿತರಣೆ ಮಾಡುತ್ತಿರುವುದು ನಮಗೆಲ್ಲಾ ಸಂತಸ ತಂದಿದೆ. ಗೌರಿ ಗಣೇಶ ಎಲ್ಲರಿಗೂ ಸುಖ ಶಾಂತಿಯನ್ನು ತರಲಿ ಪ್ರತಿಯೊಬ್ಬರೂ ಹಬ್ಬದ ವಾತಾವರಣದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಸುಖ ಸಂತೋಷದಿಂದಾಗಿ ಮನೆಯಲ್ಲಿಯೇ ಹಬ್ಬ ಆಚರಿಸಲಿ ಎಂದು ಹೇಳಿದರು.
ದಾಸರಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ಎನ್. ಲೋಕೇಶ್, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ಗೌಡ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೌಂದರ್ಯ ಭರತ್, ವಿಜಯ್ ಕುಮಾರ್, ಬಾಗಲಗುಂಟೆ ವಾರ್ಡ್ ಅಧ್ಯಕ್ಷ ಮಧು ಕುಮಾರ್, ಮಧು, ಬಿಜೆಪಿ ಮುಖಂಡರುಗಳಾದ ನಟರಾಜು, ಬಾಲಕೃಷ್ಣ, ವಿಮಲ, ಸುಧಾ ಇನ್ನಿತರಿದ್ದರು.

Related