ಭಾರತದಲ್ಲಿ ಗ್ಯಾಲಕ್ಸಿ ಎ55 5ಜಿ, ಗ್ಯಾಲಕ್ಸಿ ಎ35 5ಜಿ ಬಿಡುಗಡೆ

ಭಾರತದಲ್ಲಿ ಗ್ಯಾಲಕ್ಸಿ ಎ55 5ಜಿ, ಗ್ಯಾಲಕ್ಸಿ ಎ35 5ಜಿ ಬಿಡುಗಡೆ
ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್‌ಸಂಗ್ ಇಂದು ಅದ್ಭುತವಾದ ಆವಿಷ್ಕಾರಗಳನ್ನು ಹೊಂದಿರುವ ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಅನ್ನು ಬಿಡುಗಡೆ ಮಾಡಿದೆ. ಹೊಸ ಎ ಸರಣಿಯ ಸಾಧನಗಳು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ರಕ್ಷಣೆ, ಎಐ ಫೀಚರ್ ಗಳುಳ್ಳ ಕ್ಯಾಮೆರಾ, ಟ್ಯಾಂಪರ್-ರೆಸಿಸ್ಟೆಂಟ್ ಸೆಕ್ಯೂರಿಟಿ, ಸ್ಯಾಮ್‌ಸಂಗ್ ನಾಕ್ಸ್ ವಾಲ್ಟ್ ಸೇರಿದಂತೆ ಅನೇಕ ಪ್ರಮುಖ ಹೊಸ ವೈಶಿಷ್ಟ್ಯಗಳನ್ನು ಹೊಂದಿವೆ.
“ಗ್ಯಾಲಕ್ಸಿ  ಎ ಸರಣಿಯು ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಸರಣಿಯಾಗಿದೆ. ಇದು ಭಾರತದ ಎಂಝಡ್ ಗ್ರಾಹಕರಲ್ಲಿ ಮಧ್ಯೆ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಗ್ಯಾಲಕ್ಸಿ ಎ55 5ಜಿ & ಎ35 5ಜಿ ಬಿಡುಗಡೆಯು ಹೊಸ ರೀತಿಯ ಅಪೂರ್ವ ನಾವೀನ್ಯತೆಗಳನ್ನು ಎಲ್ಲರಿಗೂ ದೊರಕಿಸುವಂತೆ ಮಾಡುವ ನಮ್ಮ ಬದ್ಧತೆಯನ್ನು ಪ್ರತಿಪಾದಿಸುತ್ತದೆ. ಗ್ಯಾಲಕ್ಸಿ ಎ55 5ಜಿ ಮತ್ತು ಎ35 5ಜಿ ಸಾಧನಗಳು 5ಜಿ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಮತ್ತು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಿಡ್ ಪ್ರೀಮಿಯಂ (ರೂ.30,000-ರೂ.50,000) ವಿಭಾಗದಲ್ಲಿ ನಮ್ಮ ನಾಯಕತ್ವವನ್ನು ಗಟ್ಟಿಗೊಳಿಸಲು ನಮಗೆ ಸಹಾಯ ಮಾಡುತ್ತದೆ” ಎಂದು ಸ್ಯಾಮ್‌ಸಂಗ್ ಇಂಡಿಯಾದ ಎಂಎಕ್ಸ್ ಬಿಸಿನೆಸ್ ಸೀನಿಯರ್ ಡೈರೆಕ್ಟರ್ ಘುಫ್ರಾನ್ ಆಲಂ ಹೇಳಿದರು.
ಕ್ಯಾಮೆರಾ ಆವಿಷ್ಕಾರಗಳು: ಈ ಹೊಸ ಎ ಸರಣಿಯ ಸ್ಮಾರ್ಟ್‌ಫೋನ್‌ಗಳು ಬಳಕೆದಾರರು ಅತ್ಯುನ್ನತ ಕಂಟೆಂಟ್ ಗಳನ್ನು ಸಿದ್ಧಗೊಳಿಸಲು ನವೀನ ಎಐ- ವರ್ಧಿತ ಕ್ಯಾಮೆರಾ ವೈಶಿಷ್ಟ್ಯಗಳನ್ನು ನೀಡುತ್ತವೆ. ಫೋಟೋ ರೀಮಾಸ್ಟರ್, ಇಮೇಜ್ ಕ್ಲಿಪ್ಪರ್ ಮತ್ತು ಆಬ್ಜೆಕ್ಟ್ ಎರೇಸರ್ ಎಂಬ ಈ ವೈಶಿಷ್ಟ್ಯಗಳು ಲಭ್ಯವಿದೆ. ಗ್ಯಾಲಕ್ಸಿ ಎ55 5ಜಿ ಮತ್ತು ಎ35 5ಜಿ ಗಳು 50 ಎಂಪಿ ಟ್ರಿಪಲ್ ಕ್ಯಾಮೆರಾ ಹೊಂದಿದ್ದು, ಎಐ ಇಮೇಜ್ ಸಿಗ್ನಲ್ ಪ್ರೊಸೆಸಿಂಗ್ (ಐಎಸ್ಪಿ)ಮೂಲಕ ಉನ್ನತೀಕರಿಸಲ್ಪಟ್ಟ ನೈಟೋಗ್ರಫಿ ಹೆಗ್ಗಳಿಕೆ ಪಡೆದಿದೆ. ಆ ಮೂಲಕ ಎ ಸರಣಿಯಲ್ಲಿ ನೀವು ಹಿಂದೆಂದೂ ನೋಡಿರದ ಕಡಿಮೆ-ಬೆಳಕಿನ ಚಿತ್ರಗಳನ್ನು ತೆಗೆಯಬಹುದಾಗಿದೆ.
ಅತ್ಯುತ್ತಮ ಕಾರ್ಯಕ್ಷಮತೆ: 4ಎನ್ಎಂ ಪ್ರೊಸೆಸ್ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಹೊಚ್ಚ ಹೊಸ ಎಕ್ಸಿನೋಸ್ 1480 ಪ್ರೊಸೆಸರ್ ಗ್ಯಾಲಕ್ಸಿ ಎ55 5ಜಿಗೆ ಅಪಾರವಾದ ಶಕ್ತಿ ನೀಡುತ್ತದೆ. ಗ್ಯಾಲಕ್ಸಿ ಎ35 5ಜಿ ಅನ್ನು 5ಎನ್ಎಂ ಪ್ರೊಸೆಸ್ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಎಕ್ಸಿನೋಸ್ 1380 ಪ್ರೊಸೆಸರ್‌ಗೆ ಅಪ್‌ಗ್ರೇಡ್ ಮಾಡಲಾಗಿದೆ. ಈ ಅತ್ಯುನ್ನತ ಫೋನ್‌ಗಳು ಹಲವಾರು ಎನ್ಪಿಯು, ಜಿಪಿಯು ಮತ್ತು ಸಿಪಿಯು ಅಪ್‌ಗ್ರೇಡ್‌ಗಳೊಂದಿಗೆ 70%+ ದೊಡ್ಡ ಕೂಲಿಂಗ್ ಚೇಂಬರ್‌ನೊಂದಿಗೆ ಬರುತ್ತವೆ. ಅದು ನೀವು ಆಟವಾಡುತ್ತಿರುವಾಗಲೀ, ಅಥವಾ ಮಲ್ಟಿ ಟಾಸ್ಕಿಂಗ್ ಮಾಡುತ್ತಿರುವಾಗಲೀ ಅತ್ಯುತ್ತಮವಾಗಿ ಕಾರ್ಯನಿರ್ಹವಿಸುವಂತೆ ಮಾಡುತ್ತದೆ.
ಅದ್ಭುತ ಅನುಭವ: ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಖರೀದಿದಾರರು ಸ್ಯಾಮ್ಸಂಗ್ ವ್ಯಾಲೆಟ್ ಸೌಲಭ್ಯ ಪಡೆಯುತ್ತಾರೆ. ಇದು ನಿಮ್ಮ ಗ್ಯಾಲಕ್ಸಿ ಸಾಧನದಲ್ಲಿ ನಿಮ್ಮ ಅಗತ್ಯ ವಸ್ತುಗಳನ್ನು ಅನುಕೂಲಕರವಾಗಿ ಮತ್ತು ಸುರಕ್ಷಿತವಾಗಿ ಸಾಗಿಸಲು ಅನುವು ಮಾಡಿಕೊಡುವ ಮೊಬೈಲ್ ವ್ಯಾಲೆಟ್ ವೈಶಿಷ್ಟ್ಯವಾಗಿದೆ. ನಿಮ್ಮ ಪಾವತಿ ಕಾರ್ಡ್‌ಗಳು, ಡಿಜಿಟಲ್ ಐಡಿ, ಪ್ರಯಾಣ ಟಿಕೆಟ್‌ಗಳು ಮತ್ತು ಹೆಚ್ಚಿನದನ್ನು ಇದರಲ್ಲಿ ಸೇರಿಸಬಹುದು. ಈ ಸಾಧನಗಳು ಹೆಚ್ಚು ಜನಪ್ರಿಯವಾಗಿರುವ ವಾಯ್ಸ್ ಫೋಕಸ್ ವೈಶಿಷ್ಟ್ಯವನ್ನು ಹೊಂದಿದ್ದು ಅದು ಬಳಕೆದಾರರಿಗೆ ವಾತಾವರಣದಲ್ಲಿರುವ ಶಬ್ದಗಳ ಬಗ್ಗೆ ಚಿಂತಿಸದೆ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಅನುಮತಿಸುತ್ತದೆ.
ಉತ್ಪನ್ನ ಸ್ಟೋರೇಜ್ ವೇರಿಯೆಂಟ್ ಬೆಲೆ*
ಗ್ಯಾಲಕ್ಸಿ ಎ55 5ಜಿ 8GB+128GB ರೂ. 36999
8GB+256GBರೂ. 39999
12GB+256GBರೂ. 42999
ಗ್ಯಾಲಕ್ಸಿ ಎ35 5ಜಿ 8GB+128GB ರೂ. 27999
8GB+256GBರೂ. 30999

Related