ಚಾಲಕರಿಗೆ ಉಚಿತ ಲಸಿಕೆ, ಆಹಾರ ಕಿಟ್ ವಿತರಣೆ

ಚಾಲಕರಿಗೆ ಉಚಿತ ಲಸಿಕೆ, ಆಹಾರ ಕಿಟ್ ವಿತರಣೆ

ಬೆಂಗಳೂರು: ಬೊಮ್ಮನಹಳ್ಳಿ ಆಕ್ಟ್ ಸಂಸ್ಥೆ, ಅಕ್ಷಯ ಪಾತ್ರೆ ಫೌಡೇಶನ್ ವತಿಯಿಂದ ಆಟೋ ಚಾಲಕರಿಗೆ ಉಚಿತವಾಗಿ ಕೋವಿಡ್ ಲಸಿಕೆ, ಪುಡ್ ಕಿಟ್ ವಿತರಿಸಲಾಗಿದೆ.

ಈ ಅಭಿಯಾನವನ್ನು ಶಾಸಕ ಸತೀಶ್ ರೆಡ್ಡಿ ಉದ್ಘಾಟಿಸಿ ಮಾತನಾಡಿ  ಲಾಕ್ಡೌನ್ ವೇಳೆ ಆಟೋ, ಕ್ಯಾಬ್ ಚಾಲಕರು ಅನುಭವಿಸಿದ ಕಷ್ಟ ಹೇಳತೀರದು, ನನ್ನ ಕ್ಷೇತ್ರದ ಆಟೋ, ಕ್ಯಾಬ್ ಚಾಲಕರಿಗೆ ತೊಂದರೆಯಾಗಬಾರದೆಂದು ಈ ರೀತಿ ಉಚಿತ ಲಸಿಕೆ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಶೇಕಡಾ ೫೫ ರಷ್ಟು ವ್ಯಾಕ್ಷಿನೇಷನ್ ಪೂರ್ಣಗೊಂಡಿದೆ. ಬೊಮ್ಮನಹಳ್ಳಿ ವಲಯದಲ್ಲಿ ೪ ಲಕ್ಷದ ೭೫ ಜನರಿಗೆ ಲಸಿಕೆ ನೀಡಲಾಗಿದೆ. ಬೊಮ್ಮನಹಳ್ಳಿಯಲ್ಲಿ ೨ ಕಾಲ್ ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಇನ್ನುಳಿದ ೪೫ ಪರ್ಸೆಂಟ್ ಲಸಿಕೆಯನ್ನು ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ ಎಂದು ಶಾಸಕ ಸತೀಶ್ ರೆಡ್ಡಿ ಭರವಸೆ ಕೊಟ್ಟಿದ್ದಾರೆ.

ಕ್ಷೇತ್ರದಲ್ಲಿ ಪ್ರತಿದಿನ ೪೦೦ ರಿಂದ ೫೦೦ ಜನಕ್ಕೆ ಲಸಿಕೆ ನೀಡಲಾಗುತ್ತಿದೆ. ಇದರ ಜೊತೆಗೆ ಎನ್ಜಿಓ ಸಹಕಾರದಿಂದ ಒಂದು ವಾರದಲ್ಲಿ ೫೦೦ ಕ್ಕೂ ಹೆಚ್ಚು ಲಸಿಕೆ ನೀಡಲಾಗುತ್ತಿದೆ. ಒಂದು ತಿಂಗಳಲ್ಲಿ ೭ ಸಾವಿರಕ್ಕೂ ಹೆಚ್ಚು ಲಸಿಕೆಯನ್ನು ಎನ್ಜಿಓ ಸಹಕಾರದಿಂದ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಕೋವಿಡ್ ಮೂರನೇ ಅಲೆಗೆ ಸಿದ್ದತೆ, ಉಚಿತ ಚಿಕಿತ್ಸೆ, ಹೆಚ್ಚಿನ ಬೆಡ್ ವ್ಯವಸ್ಥೆ

ಕರೋನಾ ೩ನೇ ಅಲೆಯನ್ನು ಧೈರ್ಯವಾಗಿ ಎದುರಿಸಲು ಕ್ಷೇತ್ರದಲ್ಲಿ ಸಿದ್ದತೆ ಮಾಡಿಕೊಂಡಿದ್ದೇವೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಹೆಚ್ಚಿನ ಬೆಡ್ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಬೆಡ್ ಅವಶ್ಯಕತೆಯಿದ್ದವರು ನೇರವಾಗಿ ಆಪ್ ಮೂಲಕ ಬುಕ್ ಮಾಡಬಹುದು. ಸೋಂಕಿತರಿಗೆ ಬಿಬಿಎಂಪಿ ಕಡೆಯಿಂದ ಉಚಿತ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ.

ಅಭಿವೃದ್ಧಿ ಕೆಲಸಗಳಿಗೆ ಚಾಲನೆ. ಶಾಸಕರಿಂದ ಗುದ್ದಲಿ ಪೂಜೆ

ಉಚಿತ ಲಸಿಕೆ ಅಭಿಯಾನ ಉದ್ಘಾಟಿಸಿದ ಬಳಿಕ ಸತೀಶ್ ರೆಡ್ಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೂ ಚಾಲನೆ ನೀಡಿದ್ದಾರೆ. ಪರಂಗಿ ಪಾಳ್ಯ ಗ್ರಾಮದಲ್ಲಿ ಸಿಮೆಂಟ್ ರಸ್ತೆ ಮಾಡಲಾಗುತ್ತಿದ್ದು, ಈ ಕಾಮಗಾರಿ  ಆರಂಭಗೊಂಡಿದೆ. ೨ ಕೋಟಿ ರೂ ವೆಚ್ಚದ ಕಾಮಗಾರಿ ಇದ್ದಾಗಿದ್ದು, ನಿನ್ನೆ ಶಾಸಕ ಸತೀಶ್ ರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

ಈ ಹಿಂದೆಯೂ ಈ ಭಾಗದಲ್ಲಿ ಸಿಮೆಂಟ್ ರಸ್ತೆಗಳನ್ನು ಮಾಡಲಾಗಿತ್ತು. ಮನೆಗಳ ನರ‍್ಮಾಣ, ಚರಂಡಿಗಳ ನಿರ್ಮಾಣದಿಂದ ಕೆಲವು ರಸ್ತೆಗಳು ಹಾಳಾಗಿದ್ದು, ಅವುಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತದೆ. ಲಾಕ್ಡೌನ್ ಸಂದರ್ಭದಲ್ಲಿಯೂ ನಮ್ಮ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಲಾಗಿದೆ. ಕಳೆದ ಒಂದುವರೆ  ವರ್ಷದಲ್ಲಿ ಹೆಚ್ಎಸ್ಆರ್ ಲೇಔಟ್ನಲ್ಲಿಯೇ ೪೦ ಕೋಟಿ ರೂ ವೆಚ್ಚದ ಕಾಮಗಾರಿಗಳು ನಡೆದಿವೆ. ೨೫ ಕೋಟಿ ರೂ ವೆಚ್ಚದಲ್ಲಿ ಪ್ಲೇಗ್ರೌಂಡ್ ಅಭಿವೃದ್ಧಿ, ಕೆರೆಗಳ ಅಭಿವೃದ್ದಿ ಕಾಮಗಾರಿ ಮಾಡಲಾಗಿದೆ. ಕರೋನಾ ಇದ್ದರು ಕ್ಷೇತ್ರದಲ್ಲಿ ನಿರಂತರ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.

Related