ಮಾಜಿ ಸಚಿವ ಬಿ ನಾಗೇಂದ್ರ ಅವರಿಗೆ ಶುರುವಾಯಿತು ಮತ್ತಷ್ಟು ಧವಢವ..!

ಮಾಜಿ ಸಚಿವ ಬಿ ನಾಗೇಂದ್ರ ಅವರಿಗೆ ಶುರುವಾಯಿತು ಮತ್ತಷ್ಟು ಧವಢವ..!

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರು ಈಗಾಗಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಮತ್ತೆ ಬಿ ನಾಗೇಂದ್ರ ಅವರಿಗೆ ಢವಢವ ಶುರುವಾಗಿದೆ.

ಹೌದು, ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಎಸ್ಐಟಿ ಅಧಿಕಾರಿಗಳು ಇದೀಗ ಮಾಜಿ ಸಚಿವ ಬಿ ನಾಗೇಂದ್ರ ಅವರ ಆಪ್ತ ಕಾರ್ಯದರ್ಶಿಯನ್ನು ತನಿಖೆಗೆ ನಡೆಸುತ್ತಿದ್ದು ಇದೀಗ ಬಿ ನಾಗೇಂದ್ರ ಅವರಿಗೆ ಮತ್ತಷ್ಟು ಢವಢವ ಶುರುವಾಗಿದೆ.

ಹಗರಣಕ್ಕೆ ಸಂಬಂಧಿಸಿದಂತೆ ನಿಗಮದ ಎಂಡಿ ಪದ್ಮನಾಭ ಮತ್ತು ಅಕೌಟೆಂಟ್ ಪರಶುರಾಮ್ ಬಂಧನವಾಗಿದ್ದಾರೆ.‌ ಜೊತೆಗೆ ಪ್ರಕರಣದ ಕಿಂಗ್ ಪಿನ್ ಸತ್ಯನಾರಾಯಣ ವರ್ಮ, ಸಾಯಿ ತೇಜ ಕೂಡ ಆರೆಸ್ಟ್ ಆಗಿದ್ದಾರೆ. ಅಕ್ರಮವಾಗಿ ಆಂಧ್ರದ ಫಸ್ಟ್ ಬ್ಯಾಂಕ್‌ಗೆ ಹಣ ರವಾನಿಸಿದ ಎಂಡಿ ಹಾಗೂ ಸಚಿವ ನಾಗೇಂದ್ರರ ಪಿಎಸ್ ಆಗಿದ್ದ ದೇವಂದ್ರರನ್ನು ಎಸ್ಐಟಿ ವಿಚಾರಣೆ ನಡೆಸಿದೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಇನ್ನು ಎರಡು ವಾರ ಜೈಲೇ ಗತಿ..!

ಅಕ್ರಮವಾಗಿ ಕೋಟಿ ಕೋಟಿ ಹಣ ಪಡೆದಿರುವುದಾಗಿ ಸತ್ಯನಾರಾಯಣ ವರ್ಮ ಹೇಳಿದ್ದ. ಹೀಗಾಗಿ ಪಿಎಸ್ ದೇವೇಂದ್ರಪ್ಪಗೆ ಎಸ್ಐಟಿ ನೋಟೀಸ್ ನೀಡಿ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ, ದೇವೇಂದ್ರಪ್ಪಗೆ 4.4 ಕೋಟಿ ಹಣ ನೀಡಿರುವುದು ಬೆಳಕಿಗೆ ಬಂದಿದೆ. ಈ ಹಣದಲ್ಲಿ 4 ಕೋಟಿ ರಿಕವರಿಯಾಗಿದ್ದು, ಇನ್ನೂ ಸುಮಾರು 40 ಲಕ್ಷ ಹಣ ಮರಳಿ ಸಿಗಬೇಕಿದೆ.

 

Related